ನವದೆಹಲಿ, ಫೆ 04 (DaijiworldNews/HR): ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಜುಮ್ಲಾ ಫಾರ್ ಇಂಡಿಯಾ, ಜಾಬ್ಸ್ ಫಾರ್ ಚೀನಾ' (ಭಾರತಕ್ಕೆ ಸುಳ್ಳು ಭರವಸೆ, ಚೀನಾಗೆ ಉದ್ಯೋಗ) ಎಂದು ಟೀಕಿಸಿದ್ದಾರೆ.
ಇನ್ನು ಭಾರತಕ್ಕೆ ಜುಮ್ಲಾ, ಚೀನಾಗೆ ಉದ್ಯೋಗ, ಮೋದಿ ಸರ್ಕಾರವು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಅಸಂಘಟಿತ ವಲಯ ಮತ್ತು ಎಂಎಸ್ಎಂಇಗಳನ್ನು ನಾಶಪಡಿಸಿದೆ. ಪರಿಣಾಮ 'ಮೇಕ್ ಇನ್ ಇಂಡಿಯಾ' ಈವಾಗ 'ಬಯ್ ಫ್ರಮ್ ಚೀನಾ' (ಚೀನಾದಿಂದ ಖರೀದಿಸಿ) ಆಗಿದೆ' ಎಂದು ಆರೋಪಿಸಿದ್ದಾರೆ..
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿ, ಬಿಜೆಪಿಯನ್ನು 'ಬೀಜಿಂಗ್ ಜನತಾ ಪಕ್ಷ' ಎಂದು ಕರೆದಿದ್ದಾರೆ.