ನವದೆಹಲಿ, ಫೆ 04 (DaijiworldNews/HR): ಭಾರತದಲ್ಲಿ ಒಟ್ಟೂ 5 ಲಕ್ಷ ಮಂದಿ ಕೊರೊನಾಗೆ ಬಲಿಯಾಗಿದ್ದು, ಯುಎಸ್ ಮತ್ತು ಬ್ರೆಜಿಲ್ ನಂತರ ಹೆಚ್ಚು ಸಾವು ಉಂಟಾದ ವಿಶ್ವದ ಮೂರನೇ ದೇಶ ಭಾರತವಾಗಿದೆ.
ಕಳೆದ ವರ್ಷ ಜುಲೈ 1 ರಂದು ದಾಖಲಾದ 4 ಲಕ್ಷದಿಂದ 5 ಲಕ್ಷ ಸಾವುಗಳನ್ನು ತಲುಪಲು ದೇಶವು 217 ದಿನಗಳನ್ನು ತೆಗೆದುಕೊಂಡಿದ್ದು, 1 ಲಕ್ಷ ಸಾವುಗಳನ್ನು ದಾಖಲಿಸಲು ದೀರ್ಘ ಸಮಯ ತೆಗೆದುಕೊಂಡಿದೆ.
ಇನ್ನು ಅಕ್ಟೋಬರ್ 2, 2020ರ ವೇಳೆಗೆ ದೇಶದಲ್ಲಿ ಸಾವಿನ ಸಂಖ್ಯೆ 1 ಲಕ್ಷದಷ್ಟು ಹೆಚ್ಚಾಗಿದ್ದು, ಗುರುವಾರ 1,072 ಸಾವಿನ ಸಂಖ್ಯೆಯೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 5,00,055ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.