ಬೆಳಗಾವಿ, ಫೆ 04(DaijiworldNews/KP): ಉಡುಪಿ ಕಾಲೇಜಿನಲ್ಲಿ ಆಗಿರುವಂತೆ ರಾಜ್ಯದಾದ್ಯಂತ ಸಮವಸ್ತ್ರ ವಿಷಯದಲ್ಲಿ ಗೊಂದಲ ಎದುರಾದರೆ ದೊಡ್ಡ ಸಮಸ್ಯೆಯಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಗಳನ್ನು ಪೂರ್ಣ ತಿಳಿದುಕೊಳ್ಳಬೇಕು, ಕೇಸರಿ ಶಾಲು ಹಾಕಿ ಎಂದು ಧರ್ಮದಲ್ಲಿ ಹೇಳಿಲ್ಲ. ಧರ್ಮಗಳು ಒಳ್ಳೇಯದನ್ನೇ ಹೇಳಿದೆ. ಆದರೆ ಕೆಲವು ಸಂಘಟನೆಗಳಿಂದ ದಾರಿ ತಪ್ಪಿಸುವ ಪ್ರಯತ್ನ ಆಗುತ್ತಿದೆ. ಕಲಿಯುವ ಮತ್ತು ಜ್ಞಾನ ಪಡೆಯುವ ವಯಸ್ಸಿನಲ್ಲಿ ಧರ್ಮ, ಜಾತಿ ಮಧ್ಯೆ ಬಂದರೆ ಸಮಸ್ಯೆಯಾಗುತ್ತದೆ ಎಂದರು.
ಜಾತಿ-ಧರ್ಮ ಜೊತೆಯಲ್ಲಿಯೇ ಇರುತ್ತದೆ ಅದನ್ನು ಶಾಲೆ-ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರದ ವಿಚಾರದಲ್ಲಿ ತರಬಾರದು, ಇನ್ನಾದರು ಸರ್ಕಾರ ಎಚ್ಚೆತ್ತು ಶಿಕ್ಷಣ ಸಂಸ್ಥೆಯಲ್ಲಾದ ಗೊಂದಲವನ್ನು ಪರಿಹಾರಿಸಬೇಕು ಎಂದು ಹೇಳಿದರು.