ಬೆಳಗಾವಿ, ಫೆ 04(DaijiworldNews/MS): "ವಿದ್ಯಾಭ್ಯಾಸ , ಶಿಕ್ಷಣಕ್ಕಿಂತ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮುಖ್ಯ ಎನ್ನುವವರು ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನಕ್ಕೆ ಹೋಗಲಿ" ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿ, "ವಿವಾದ ಸೃಷ್ಟಿಯಾದ ಆರಂಭದಲ್ಲಿಯೇ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ, ರಾಜ್ಯಾದ್ಯಾಂತ ಈ ಪ್ರಕರಣ ಹಬ್ಬುತ್ತಿರಲಿಲ್ಲ. ಆರಂಭದಲ್ಲಿಯೇ ಹಿಜಾಬ್ಧಾರಿ ವಿದ್ಯಾರ್ಥಿನಿಯನ್ನು ಕಾಲೇಜ್ಗಳಲ್ಲಿ ಅಮಾನತು ಮಾಡಿದ್ದರೆ, ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಶಿಸ್ತಿಗಿಂತ ಇಸ್ಲಾಂ ಸಂಸ್ಕೃತಿಯೇ ಪ್ರಮುಖ ಎನ್ನುವವರು ಅಫ್ಘಾನಿಸ್ತಾನ ಹೋಗಲಿ" ಎಂದು ಟೀಕಿಸಿದ್ದಾರೆ.
"ಬುರ್ಕಾ ಧರಿಸುತ್ತೇವೆ, ಹಿಜಾಬ್ ಹಾಕುತ್ತೇವೆ, ಅಲ್ಲಿಯೇ ನಮಾಜ್ ಕೂಡ ಮಾಡುತ್ತೇವೆ ಎನ್ನುವ ಮಟ್ಟಿಗೆ ಸರ್ಕಾರ ಸಡಿಲಿಕೆ ಕೊಡಬಾರದಿತ್ತು. ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಹಿಜಾಬ್ ಬೇಕೆಂದು ಹಠ ಮಾಡುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಪ್ರಕರ್ಣ ಕೊನೆಗೊಳಿಸಬೇಕು ಎಂದು ಪ್ರಮೋದ್ ಮುತಾಲಿಕ್" ಒತ್ತಾಯಿಸಿದ್ದಾರೆ.