ದೆಹಲಿ, ಫೆ 04 (DaijiworldNews/HR): ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಬೆಂಗಾವಲು ಪಡೆಯ ಮೇಲೆ ಗುಂಡಿನ ದಾಳಿ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಮುಂಜಾನೆ ಮೀರತ್ನ ಕಿತೌಧ್ ಪ್ರದೇಶದಿಂದ ದೆಹಲಿಗೆ ಹೊರಟಿದ್ದ ಓವೈಸಿ ಅವರ ಬೆಂಗಾವಲು ಪಡೆ ಮೇಲೆ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದರು.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ಚುನಾವಣಾ ಪ್ರಚಾರಕ್ಕಾಗಿ ಉತ್ತರ ಪ್ರದೇಶದ ಮೀರತ್ನಲ್ಲಿದ್ದರು. ದೆಹಲಿ ತಲುಪಿದ ನಂತರ ಓವೈಸಿ, 'ನಾನು ಮೀರತ್ ಮತ್ತು ಕಿತೌದಲ್ಲಿ ರೋಡ್ಶೋ ನಡೆಸಿದ್ದೇನೆ. ನಾನು ಹಿಂತಿರುಗುವಾಗ ನನ್ನ ಕಾರಿಗೆ ಗುಂಡು ಹಾರಿಸಲಾಯಿತು. ಹೇಗೋ ನನ್ನ ಕಾರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಾನು ಇಬ್ಬರನ್ನು ನೋಡಿದ್ದೇನೆ. ಒಬ್ಬರು ಕೆಂಪು ಹೆಡ್ಡೈ ಧರಿಸಿದ್ದರು. ಇನ್ನೊಬ್ಬರು ಬಿಳಿ ಜಾಕೆಟ್ ಧರಿಸಿದ್ದರು. ನನ್ನ ಕಾರಿನ ಟೈರ್ ಪಂಕ್ಚರ್ ಆಗಿತ್ತು ಮತ್ತು 2-3 ಕಿಮೀ ನಂತರ ನಾನು ಕಾರನ್ನು ಬದಲಾಯಿಸಿದೆ ಎಂದು ಹೇಳಿದ್ದರು.
ಇನ್ನು ನಾನು ಹೆಚ್ಚುವರಿ ಎಸ್ಪಿಯೊಂದಿಗೆ ಮಾತನಾಡಿದ್ದು, ಇಬ್ಬರನ್ನು ಬಂಧಿಸಲಾಗಿದೆ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.