ಬೆಂಗಳೂರು, ಫೆ 04 (DaijiworldNews/HR): ವಾಕ್ ಸ್ವಾತಂತ್ರ್ಯ ಎಂದರೆ ಕೆಲವರು ಬೇರೆ ದೇಶಕ್ಕೆ ಜಿಂದಾಬಾದ್ ಹೇಳುವುದಕ್ಕೆ ಬಳಸುತ್ತಾರೆಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.
ವಿಕಾಸಸೌಧದಲ್ಲಿ ನಡೆಯುತ್ತಿರುವ ಎರಡನೇ ದಿನದ ಕಾರ್ಯಾಗಾರದಲ್ಲಿ ಸಂವಿಧಾನ ಅಡಿಯಲ್ಲಿ ಜನರ ನಿರೀಕ್ಷೆ ಹಾಗೂ ಶಾಸಕರ ಜವಾಬ್ದಾರಿ ವಿಷಯ ಮಂಡಿಸಿ ಮಾತನಾಡಿದ ಅವರು, "ಸ್ವಾತಂತ್ರ ಅಂದರೆ ಸ್ವೇಚ್ಛೆಯಿಂದ ವರ್ತಿಸುವುದಲ್ಲ. ವಾಕ್ ಸ್ವಾತಂತ್ರ್ಯ ಅಂತ ಕೆಲವರು ಬೇರೆ ದೇಶದ ಜಿಂದಾಬಾದ್ ಅಂತಾ ಹೇಳ್ತಾರೆ. ಕಾರ್ಯಕ್ರಮವೊಂದರಲ್ಲಿ ಯುವತಿಯೊಬ್ಬಳು ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿದ್ದಳು. ಆಕೆಯನ್ನ ಪೊಲೀಸರು ಬಂಧಿಸಿ ಕರೆದೊಯ್ದರು. ಇದನ್ನ ಕೆಲವರು ಟೀಕಿಸಿದರು. ನಮಗೆ ವಾಕ್ ಸ್ವಾತಂತ್ರ್ಯ ಇಲ್ಲವಾ ಅಂತ ಪ್ರಶ್ನೆ ಮಾಡಿದ್ರು. ನಮ್ಮ ಸಂವಿಧಾನದಲ್ಲಿ ಅದಕ್ಕೆಲ್ಲ ಅವಕಾಶ ಇಲ್ಲ" ಎಂದರು.
ಇನ್ನು ಡಾ.ಬಿಆರ್. ಅಂಬೇಡ್ಕರ್ ಗೆ ಎಷ್ಟು ಗೌರವ ಸೂಚಿಸಿದರೂ ಕಡಿಮೆಯೇ. ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠವಾದುದು. ಬೇರೆ ದೇಶಗಳಲ್ಲಿ ಹಲವು ಬಾರಿ ಸಂವಿಧಾನವನ್ನು ಬದಲಾಯಿಸಲಾಗಿದೆ. ಪಾಕಿಸ್ತಾನದಲ್ಲಿ ನಾಲ್ಕು ಭಾರಿ ಬದಲಾಯಿಸಲಾಗಿದೆ. ನಮ್ಮ ದೇಶದಲ್ಲಿ 73 ವರ್ಷವಾದರೂ ಬದಲಾವಣೆ ಮಾಡಿಲ್ಲ ಎಂದು ಹೇಳಿದ್ದಾರೆ.