ಲಖನೌ, ಫೆ 04(DaijiworldNews/KP): ಚುನಾವಣಾ ಪ್ರಚಾರದ ಭಾಷಣದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವಹೇಳನಕಾರಿ ಹಾಗೂ ಬೆದರಿಕೆಯೊಡ್ಡುವಂಥ ಭಾಷೆ ಬಳಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿಯವರು ತಮ್ಮ ಪಕ್ಷದ ಸದಸ್ಯರ ವಿರುದ್ಧ ನಿರಂತರವಾಗಿ ’ಗೂಂಡಾಗಳು’, ’ಮಾಫಿಯಾ’ ಪದವನ್ನು ಬಳಕೆ ಮಾಡಿದ್ದಾರೆ ಹಾಗೂ ಮಾರ್ಚ್ 10ರ ಬಳಿಕ ’ಬುಲ್ಡೋಜರ್’ ಎದುರಿಸಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರು, ಅಲ್ಲದೆ ಅಂಥ ಪದವನ್ನು ಕೆಲವು ಪತ್ರಗಳಲ್ಲಿ ಕೂಡ ಉಲ್ಲೇಖಿಸಿದ್ದಾರೆ ಎಂದು ಸಮಾಜವಾದಿ ಪಕ್ಷ ದೂರಿದೆ.
ಇನ್ನು ಫೆಬ್ರವರಿ 10ರಂದು ಮೀರತ್ನ ಸೈವಾಲ್ಖಾಸ್ನಲ್ಲಿ ಹಾಗೂ ಕಿಥೋರ್ನಲ್ಲಿ ಕೆಂಪು ಟೋಪಿ ಎಂದರೆ ಗಲಭೆಕೋರರು, ಅಪರಾಧ ಹಿನ್ನಲೆಯುಳ್ಳವರು ಎಂದು ಹೇಳಿದ್ದಾರೆ. ಸದಾ ಬೆದರಿಕೆ ಒಡ್ಡುವಂಥ ಧ್ವನಿಯಲ್ಲಿ ಮಾತಾನಾಡುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಕ್ತಾರ ರಾಜೇಂದ್ರ ಚೌಧರಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.