ಬಾಗಲಕೋಟೆ, ಫೆ 04 (DaijiworldNews/HR): ಯಾವುದೇ ಕಾರಣಕ್ಕೂ ಸಿ.ಎಂ. ಇಬ್ರಾಹಿಂ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಸಾಧ್ಯವೇ ಇಲ್ಲ. ಅವರ ಧೂಳು ಕೂಡ ಬಿಜೆಪಿಗೆ ಬರಬಾರದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಷ್ಟ್ರವಾದಿ ಮುಸಲ್ಮಾನರು ಬಿಜೆಪಿಗೆ ಬರುವುದಾದರೆ ಸ್ವಾಗತ. ಆದರೆ ಇಬ್ರಾಹಿಂ ಅವರನ್ನು ಯಾವ ಕಾರಣಕ್ಕೂ ಬಿಜೆಪಿಗೆ ಸೇರಿಸಲ್ಲ.ರಾಷ್ಟ್ರವಾದಿ ಮುಸ್ಲಿಂರನ್ನು ಮಾತ್ರ ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದರು.
ಇನ್ನು ಕಾಂಗ್ರೆಸ್ ಕೇವಲ ವೋಟಿಗಾಗಿ ಮುಸ್ಲಿಮರನ್ನು ಬಳಸಿಕೊಂಡಿದ್ದು, ಮುಸ್ಲಿಮರು ಕೈಬಿಟ್ಟರೆ ಕಾಂಗ್ರೆಸ್ ಉಸಿರುಗಟ್ಟಿ ಸಾಯುತ್ತದೆ. ಬಿಜೆಪಿ ಜೊತೆಗೆ ಹಿಂದುಳಿದವರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗ ಮುಸಲ್ಮಾನರು ಕೂಡ ಬಿಜೆಪಿಗೆ ಬರುವುದಕ್ಕೆ ಸ್ವಲ್ಪ ಹಿಂದೆ ಮುಂದೆ ನೋಡುತ್ತಾ ಇದ್ದಾರೆ ಎಂದು ಹೇಳಿದ್ದಾರೆ.