ಪಂಜಾಬ್, ಫೆ 04(DaijiworldNews/MS): ಪಂಜಾಬ್ ನಲ್ಲಿ ಚುನಾವಣೆ ಅಖಾಡ ಕಾವೇರಿದೆ.ಈ ನಡುವೆ ಕೇಂದ್ರೀಯ ತನಿಖಾ ಸಂಸ್ಥೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಛನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿಯನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಗೆ ಶಾಕ್ ನೀಡಿದೆ.
ಅಕ್ರಮ ಮರಳು ಗಣಿಗಾರಿಕೆ ಆರೋಪಕ್ಕೆ ಸಂಬಂಧಿತ ಭೂಪಿಂದರ್ ಸಿಂಗ್ ಮನೆ, ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು ಗುರುವಾರ ಸಂಜೆ ಅವರನ್ನು ಬಂಧಿಸಿದ್ದು, ಇಂದು ಸಿಬಿಐ ಕೋರ್ಟ್ಗೆ ಹಾಜರುಪಡಿಸಲಿದೆ.ಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಅವರನ್ನು ಬಂಧಿಸಲಾಗಿದೆ. ಬಂಧನಕ್ಕೂ ಮುನ್ನ ಅವರನ್ನು ಸುಮಾರು ಎಂಟು ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು
ಪಂಜಾಬ್ ವಿಧಾನಸಭೆ ಚುನಾವಣೆ ಎರಡು ವಾರಗಳು ಬಾಕಿ ಇರುವಾಗ ಈ ಘಟನೆ ಮಹತ್ವ ಪಡೆದಿದೆ. ಹನಿ ಅವರಿಗೆ ಸೇರಿದ ಮನೆ, ಕಚೇರಿ ಹಾಗೂ ಇತರೆ ಸ್ಥಳಗಳ ಮೇಲೆ ಇ.ಡಿ ಕಳೆದ ತಿಂಗಳು ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಸುಮಾರು 10 ಕೋಟಿ ರೂ ಮೊತ್ತವನ್ನು ವಶಪಡಿಸಿಕೊಂಡಿತ್ತು. ಜತೆಗೆ ಮೊಬೈಲ್ ಫೋನ್ಗಳು, 21 ಲಕ್ಷ ರೂ ಮೌಲ್ಯದ ಚಿನ್ನ, 12 ಲಕ್ಷ ರೂ ಮೌಲ್ಯದ ರೋಲೆಕ್ಸ್ ವಾಚ್ ಮುಂತಾದವುಗಳನ್ನು ಮುಟ್ಟುಗೋಲು ಹಾಕಲಾಗಿತ್ತು, ಅದರಲ್ಲಿ 8 ಕೋಟಿ ರೂಪಾಯಿ ಚರಣಜಿತ್ ಸಿಂಗ್ ಛನ್ನಿಯವರಿಗೆ ಸೇರಿದ್ದಾಗಿದೆ ಎಂದು ಹೇಳಲಾಗುತ್ತಿದೆ.
ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ.