ಬೆಂಗಳೂರು, ಫೆ. 03 (DaijiworldNews/SM): ಶಾಲಾ-ಕಾಲೇಜು ಆವರಣದಲ್ಲಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಹೈಕೋರ್ಟ್ ಗಡುವು ನೀಡಿದೆ.
ಈ ಬಗ್ಗೆ ಹೈಕೋರ್ಟ್, ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣಾ ನಿಗಮಕ್ಕೆ ಸೂಚನೆ ನೀಡಿದೆ. ಹಾಗೂ ಮೂರು ತಿಂಗಳ ಗಡುವು ನೀಡಿದೆ.
ಕೆಪಿಟಿಸಿಎಲ್ ಪರ ವಕೀಲರು, ನ್ಯಾಯಾಲಯದ ನಿರ್ದೇಶದನಂತೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳ ಬಳಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಗುರುತಿಸುವ ಮತ್ತು ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಎಸ್ಕಾಂಗಳು ಆರಂಭಿಸಿವೆ. ಆ ಕಾರ್ಯ ಪೂರ್ಣಗೊಳಿಸಲು ಕನಿಷ್ಠ ನಾಲ್ಕೈದು ತಿಂಗಳು ಕಾಲಾವಕಾಶಬೇಕು ಎಂದು ಕೋರಿದರು. ಅದರಂತೆ ಮೂರು ತಿಂಗಳ ಗಡುವನ್ನು ಹೈಕೋರ್ಟ್ ನೀಡಿದೆ.