ನವದೆಹಲಿ, ಫೆ 03 (DaijiworldNews/HR): ಪೋಷಕರ ಕಾರಣದಿಂದಾಗಿ ರಾಹುಲ್ ಗಾಂಧಿಯವರ ಆಲೋಚನೆ ದ್ವಂದ್ವವಾಗಿದೆ ಎಂದು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ರಾಹುಲ್ ಗಾಂಧಿಯ "ಟು ಇಂಡಿಯಾಸ್" ಹೇಳಿಕೆಗೆ ಟಾಂಗ್ ನೀಡಿ ಟ್ವೀಟ್ ಮಾಡಿರುವ ಅನಿಲ್ ವಿಜ್, ಇಟಾಲಿಯನ್ ತಾಯಿ ಮತ್ತು ಭಾರತೀಯ ತಂದೆಯ ನಡುವೆ ಬೆಳೆದ ಕಾರಣ ರಾಹುಲ್ ಅವರು ಒಂದು ಭಾರತವನ್ನು ನೋಡುವ ಬದಲು ಎರಡು ಭಾರತಗಳನ್ನು ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು "ರಾಹುಲ್ ಗಾಂಧಿ ಅವರು ಎರಡು ರೀತಿಯ ಸಂಸ್ಕೃತಿಗಳ ನಡುವೆ ಬೆಳೆದ ಕಾರಣ ಒಂದೇ ಭಾರತದಲ್ಲಿ ಎರಡು ಭಾರತವನ್ನು ನೋಡುವುದು ಸಹಜ. ತಾಯಿ ಸೋನಿಯಾ ಗಾಂಧಿ ಇಟಾಲಿಯನ್ ಹಾಗೂ ತಂದೆ ರಾಜೀವ್ ಗಾಂಧಿ ಭಾರತದವರಾಗಿದ್ದು, ಇಟಲಿ ಹಾಗೂ ಭಾರತದ ಸಂಸ್ಕೃತಿ ನಡುವೆ ಬೆಳೆದಿದ್ದಾರೆ. ಹೀಗಾಗಿ ಅವರಲ್ಲಿ ದ್ವಂದ್ವ ಚಿಂತನೆಯಿದ್ದು, ಅವರು ತನ್ನ ದೇಶವನ್ನ ಒಂದು ಎಂದು ನೋಡಲಾಗುತ್ತಿಲ್ಲ" ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಶ್ರೀಮಂತರಿಗೊಂದು ಮತ್ತು ಬಡವರಿಗೊಂದು ಎಂಬ ಎರಡು ರೀತಿಯ ಭಾರತವನ್ನು ರಚಿಸಲಾಗಿದೆ ಎಂದು ಆರೋಪಿಸಿದ್ದರು.