ಮುಂಬೈ, ಫೆ 03 (DaijiworldNews/MS): ಐದು ತಿಂಗಳ ಮಗುವಿಗೆ ಹಾಲುಣಿಸುತ್ತಿರುವ ವೇಳೆ, ವೇಗವಾಗಿ ಬಂದ ಕಾರೊಂದು ಮೇಲೆ ಹರಿದ ಪರಿಣಾಮ ರಸ್ತೆ ಬದಿಯಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ್ದ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮಂಗಳವಾರ ರಾತ್ರಿ, ಬೋರಿವ್ಲಿ ವೆಸ್ಟ್ನ ಕೋರಾ ಸಿಗ್ನಲ್ನಲ್ಲಿ 29 ವರ್ಷದ ಬಲೂನ್ ಮಾರಾಟಗಾರ್ತಿ ತನ್ನ ಐದು ತಿಂಗಳ ಮಗುವಿಗೆ ಹಾಲುಣಿಸುವಾಗ ಕಾರು ಆಕೆಯ ಮೇಲೆ ಹರಿದಿದೆ. ಅಪಘಾತದ ಪರಿಣಾಮ ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಬುಧವಾರ ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ವೆಸ್ಟ್ ಕಾಂದಿವ್ಲಿಯ ಶತಾಬ್ದಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಶಿಶು ರಿವಾನ್ಶ್ ದಾಖಲಿಸಲಾಗಿದ್ದೂ, ಮಗು ಪ್ರಾಣಾಪಾಯವಿಲ್ಲದೆ ಪಾರಾಗಿದೆ.
ಕಾರು ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದು, 5 ತಿಂಗಳ ಮಗಿವಿನ ತಾಯಿಯ ಹತ್ಯೆಗೆ ಕಾರಣವಾದ ಕೊಲೆಗಾರ ಚಾಲಕನನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.