ನವದೆಹಲಿ, ಫೆ 03 (DaijiworldNews/MS): ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು ಅದನ್ನು 'ಸಾಮ್ರಾಜ್ಯವಾಗಿ’ವಾಗಿ ಆಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರೀಕರಣದ ಬಗ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಭಾರತವನ್ನು ಸಂವಿಧಾನದಲ್ಲಿ ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆಯೇ ಹೊರತು ರಾಷ್ಟ್ರ ಎಂದು ವಿವರಿಸಲಾಗಿಲ್ಲ. ಭಾರತದಲ್ಲಿ ಒಂದು ರಾಜ್ಯದ ಜನರನ್ನು ಆಳಲು ಸಾಧ್ಯವಿಲ್ಲ. ವಿವಿಧ ಭಾಷೆ ಮತ್ತು ಸಂಸ್ಕೃತಿಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇದು ಪಾಲುದಾರಿಕೆ,ಸಾಮ್ರಾಜ್ಯವಲ್ಲ" ಎಂದು ಹೇಳಿದರು.
ಸಹಕಾರಿ ಫೆಡರಲಿಸಂ, ಸಂಭಾಷಣೆ ಮತ್ತು ಸಮಾಲೋಚನೆಯ ಪ್ರಾಮುಖ್ಯತೆ ಮಹತ್ವವನ್ನು ಒತ್ತಿ ಹೇಳಿದ್ದು, ಇದೇ ದಶಕಗಳಿಂದ ಭಾರತವನ್ನು ಆಳಿದ ಏಕೈಕ ಮಾರ್ಗವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ 1947ರಲ್ಲಿ ರಾಜರ ಆಳ್ವಿಕೆಯ ಕಲ್ಪನೆಯನ್ನು ಒಡೆದು ಹಾಕಿತು, ಆದರೆ ಈಗ ಅದು ಮತ್ತೆ ಬಂದಿದೆ, ಕೇಂದ್ರ್ ಸರ್ಕಾರ ದೊಣ್ಣೆ ಹಿಡಿದು ಭಾರತವನ್ನು ಆಳಬಹುದು ಎಂಬ ದೂರದೃಷ್ಟಿ ಹೊಂದಿದೆ , ಆದರೆ ಪ್ರತಿ ಬಾರಿಯೂ ದೊಣ್ಣೆಯೇ ಮುರಿಯಲ್ಪಟ್ಟಿದೆ ಎಂದು ಅವರು ವ್ಯಂಗ್ಯವಾಡಿದರು