ಕೊಪ್ಪಳ, ಫೆ 03 (DaijiworldNews/HR): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಮೂವರು ಮುಖ್ಯಮಂತ್ರಿ ಆಗಿದ್ದಾರೆ. ಅದರಂತೆ ಈ ಬಾರಿಯೂ ಮೂವರು ಸಿಎಂ ಆಗಲಿದ್ದಾರೆ. ಆರು ತಿಂಗಳು ಅಧಿಕಾರ ಮಾಡಿ ಎಂದು ಬೊಮ್ಮಾಯಿಗೆ ಹೇಳಿದ್ದರು. ಅದರಂತೆ ಅವರ ಅವಧಿ ಮುಗಿದಿದೆ. ಇನ್ನು ಮುಂದೆ ಮತ್ತೊಬ್ಬರು ಆಗಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಈ ಕುರಿತು ಮಾತನಾಡಿದ ಅವರು, ಬಿಜೆಪಿಯಲ್ಲಿ ಬಿಎಸ್ವೈ ಬಣ, ಆರ್ಎಸ್ಎಸ್ ಬಣ ಎಂಬ ಗುಂಪುಗಳು ಇವೆ. ಅದರಂತೆ ಕಾಂಗ್ರೆಸ್ನಲ್ಲಿಯೂ ಬಣಗಳಿಗೆ. ರಾಜಕೀಯ ಪಕ್ಷಗಳಲ್ಲಿ ಗುಂಪು ಇರುವುದು ಸ್ವಾಭಾವಿಕ ಎಂದರು.
ಇನ್ನು ಗುಂಪುಗಾರಿಕೆ ಕಾಂಗ್ರೆಸ್, ಜೆಡಿಎಎಸ್ನಲ್ಲೂ ಇದೆ. ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಆನಂದ್ ಸಿಂಗ್ ಭೇಟಿ ವೈಯಕ್ತಿಕ ಇರಬಹುದು. ಇಲ್ಲವೇ ರಾಜಕೀಯ ಇರಬಹುದು. ಅದು ಅವರಿಗೆ ಗೊತ್ತು ಎಂದು ಹೇಳಿದ್ದಾರೆ.