ಬೆಂಗಳೂರು, ಫೆ 02(DaijiworldNews/MS): ಸ್ಯಾಂಡಲ್ವುಡ್ನ ಹಿರಿಯ ಪೋಷಕ ನಟ ಅಶೋಕ್ ರಾವ್ ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿರಿಯ ನಟ ತಮ್ಮ ವಿದ್ಯಾರಣ್ಯಪುರದ ನಿವಾಸದಲ್ಲಿ ಮದ್ಯರಾತ್ರಿ 12.30ಕ್ಕೆ ಕೊನೆ ಉಸಿರೆಳೆದಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಖಳ ನಟ, ಪೋಷಕ ನಟ ಪಾತ್ರಗಳಲ್ಲಿ ಮಿಂಚಿದ್ದ ಅಶೋಕ್ ರಾವ್ ನೂರಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಕಾಸರಗೋಡಿನಲ್ಲಿ ಜನಿಸಿದ ಅಶೋಕ್ ರಾವ್ ಅವರು ತಮಿಳುನಾಡಿನಲ್ಲಿ ವಿದ್ಯಾಭಾಸ ಪಡೆದಿದ್ದರು. ಡಾ. ರಾಜ್ ಕುಮಾರ್ ಅವರ 'ಪರಶುರಾಮ್' ಚಿತ್ರದಲ್ಲಿ ವಿಲನ್ ಆಗಿದ್ದ ಅಶೋಕ್ ರಾವ್ ಆ ಪಾತ್ರ ಉತ್ತಮ ಹೆಸರನ್ನು ತಂದು ಕೊಟ್ಟಿತ್ತು. ಅಶೋಕ್ ಅವರ ಕಂಚಿನ ಕಂಠದಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.
ವಿದ್ಯಾರಣ್ಯಪುರದ ನಿವಾಸದಲ್ಲಿ ಅಶೋಕ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.