ತಿರುವನಂತಪುರಂ, ಫೆ 02(DaijiworldNews/KP): ತನ್ನ ಚರ್ಮದ ಚಿಕಿತ್ಸಾ ವಿಧಾನದ ಸೌಲಭ್ಯಕ್ಕೆ ಜಾಹೀರಾತು ನೀಡಲು ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟ ವೋರ್ಗನ್ ಪ್ರೀಮನ್ ಅವರ ಫೋಟೋವನ್ನು ಕೇರಳದ ವಡಕರ ಸಹಕಾರಿ ಆಸ್ಪತ್ರೆ ಬಳಸಿಕೊಂಡು, ಭಾರಿ ಟೀಕೆಗೆ ಗುರಿಯಾಗಿದೆ.
ವಡಕರ ಸಹಕಾರಿ ಆಸ್ಪತ್ರೆಯು ಚರ್ಮದ ಚಿಕಿತ್ಸಾ ವಿಧಾನವನ್ನು ಜಾಹೀರಾತುವಿನಲ್ಲಿ ನಟನ ಫೋಟೋದ ಜೊತೆಗೆ ಇಬ್ಬರು ವೈದ್ಯರ ಹೆಸರು ಹಾಕಿ ಫೋನ್ ನಂಬರ್ ಅನ್ನು ಕೂಡ ಸೇರಿಸಿದ್ದಾರೆ.
ಜಾಹೀರಾತು ಬೋರ್ಡ್ ನಲ್ಲಿ ಚರ್ಮದ ಟ್ಯಾಗ್ಗಳು, ನರಹುಲಿಗಳು, ಮಿಲಿಯಾ ಮತ್ತು ಮೃದ್ವಂಗಿ ಸಮಸ್ಯೆಗಳನ್ನು ತೆಗೆದುಹಾಕುವಂತಹ ಚಿಕಿತ್ಸೆಯನ್ನು ಪಟ್ಟಿಮಾಡಿದ ಆಡಳಿತ ಮಂಡಳಿ ಇದಕ್ಕೆ ಆಫ್ರಿಕನ್-ಅಮೆರಿಕನ್ ನಟನ ಫೋಟೋವನ್ನು ಬಳಸಿಕೊಂಡಿದ್ದಾರೆ.
ಆಸ್ಪತ್ರೆಯ ಸೇವೆಯನ್ನು ಪ್ರಚಾರ ಮಾಡಲು ಫ್ರೀಮನ್ ಅವರ ಫೋಟೋ ಬಳಸಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ವೈರಲ್ ಆಗಿ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ವಡಕರ ಆಸ್ಪತ್ರೆ ಕ್ಷಮೆ ಯಾಚಿಸಿ, ತಕ್ಷಣವೇ ಬೋರ್ಡ್ ಅನ್ನು ತೆಗೆದುಹಾಕಿದ್ದಾರೆ.
ಇನ್ನು ತಮ್ಮ ಆಸ್ಪತ್ರೆಯ ಚಿಕಿತ್ಸೆ ಬಗ್ಗೆ ಪ್ರಚಾರಕ್ಕಾಗಿ ಇಂಟರ್ನೆಟ್ನಿಂದ ಫೋಟೋ ಡೌನ್ಲೋಡ್ ಮಾಡಲಾಗಿತ್ತು. ಆದರೆ ಈತ ಆಸ್ಕರ್ ವಿಜೇತ ನಟ ಎಂದು ಆಸ್ಪತ್ರೆ ತಿಳಿಯುವಲ್ಲಿ ವಿಫಲವಾಗಿದೆ ಎಂದು ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ಟಿ ಸುನಿಲ್ ವಿಷಾದ ವ್ಯಕ್ತಪಡಿಸಿದ್ದು, ಅಲ್ಲದೆ ಶ್ರೇಷ್ಠ ನಟನ ಮಾನಹಾನಿ ಮಾಡುವ ಉದ್ದೇಶ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನು ಜಾಹೀರಾತಿನಲ್ಲಿ ನಟನ ಫೋಟೋ ಬಳಸಿಕೊಂಡಿರುವುದಕ್ಕೆ ಆಸ್ಪತ್ರೆಯು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಕ್ಷಮೆ ಯಾಚಿಸಿದೆ.