ಲಕ್ನೋ, ಫೆ. 01 (DaijiworldNews/SM): ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಕನ್ಹಯ್ಯಾ ಕುಮಾರ್ ಮೇಲೆ ಮಸಿ ಎರಚಲಾಗಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರಕ್ಕೆಂದು ಲಕ್ನೋಗೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಇನ್ನು ಕನ್ಹಯ್ಯಾ ಕುಮಾರ್ ಮೇಲೆ ಎಸೆದಿರುವುದು ಮಸಿಯಲ್ಲ ಆಸಿಡ್ ಎನ್ನಲಾಗಿದೆ. ಆರೋಪಿಗಳು ಕನ್ಹಯ್ಯಾ ಕುಮಾರ್ ಮೇಲೆ ಆಸಿಡ್ ಎಸೆಯಲು ಪ್ರಯತ್ನಿಸಿದರು. ಆದರೆ ಅದು ವಿಫಲವಾಯಿತು. 3-4 ಯುವಕರ ಮೇಲೆ ಆಸಿಡ್ ಬಿದ್ದಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಹತ್ರಾಸ್, ಉನ್ನಾವ್ ಮತ್ತು ಲಖೀಂಪುರ ಖೇರಿ ಘಟನೆ ನಡೆದಾಗಿನಿಂದ ಕಾಂಗ್ರೆಸ್ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದೆ. ದೇಶವನ್ನು ಕಟ್ಟದವರು ದೇಶವನ್ನು ಮಾರುತ್ತಿದ್ದಾರೆ, ಕಾಂಗ್ರೆಸ್ ಭಾರತವನ್ನು ನಿರ್ಮಿಸಿದೆ, ಆದ್ದರಿಂದ ದೇಶವನ್ನು ಮಾರುತ್ತಿರುವವರಿಂದ ದೇಶವನ್ನು ಉಳಿಸುತ್ತಿದೆ ಇದುವೆ ಸಮಸ್ಯೆಗೆ ಕಾರಣ ಎಂದು ಕನ್ಹಯ್ಯಾ ಕುಮಾರ್ ಅವರು ಹೇಳಿದ್ದಾರೆ.