ಮೈಸೂರು, ಫೆ 01 (DaijiworldNews/HR): ಈ ಬಾರಿ ನಿರ್ಮಲ ಸೀತಾರಾಮ್ ಮಂಡಿಸಿರುವ ಬಜೆಟ್ 'ಸಬ್ ಕಾ ವಿನಾಶ್ ಬಜೆಟ್ ಆಗಿದೆ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸಬ್ ಕಾ ವಿನಾಶ್ ಬಜೆಟ್ ಆಗಿದ್ದು, ಇಂದು ಮಂಡನೆಯಾಗಿರುವ ಬಜೆಟ್ನಲ್ಲಿ ಕೇಂದ್ರ ಬಜೆಟ್ ಯಾವುದಕ್ಕೂ ಆದ್ಯತೆ ನೀಡಿಲ್ಲ ಎಂದು ಗುಡುಗಿದ್ದಾರೆ.
ಇನ್ನು ಇಂದು ಮಂಡಿಸಿರುವ ಬಜೆಟ್ ನಲ್ಲಿ ರಾಜ್ಯದ ಜನತೆಗೆ ಏನನ್ನು ಘೋಷಿಸಿಲ್ಲ. ಹಾಗಾಗಿ ಇದೊಂದು 'ಸಬ್ ಕಾ ವಿನಾಶ್ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.