ನವದೆಹಲಿ, ಫೆ 01 (DaijiworldNews/HR): ಈ ಬಾರಿಯ ಬಜೆಟ್ಗೆ ಜನಸಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಜನರ ಪ್ರತಿಕ್ರಿಯೆಯಿಂದ ಸೇವೆ ಮಾಡಲು ಹುಮ್ಮಸ್ಸು ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಈ ಬಜೆಟ್ ಜನರಿಗೆ ಹೊಸ ಭರವಸೆಗಳು ಮತ್ತು ಅವಕಾಶಗಳನ್ನ ತರುತ್ತದೆ. ಇದು ಹೆಚ್ಚಿನ ಮೂಲಸೌಕರ್ಯ, ಹೆಚ್ಚಿನ ಹೂಡಿಕೆ, ಹೆಚ್ಚಿನ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗಗಳಿಂದ ತುಂಬಿದ್ದು, ಬಜೆಟ್ ಯುವಕರಿಗೆ ಉಜ್ವಲ ಭವಿಷ್ಯವನ್ನು ಖಾತ್ರಿಗೊಳಿಸುತ್ತದೆ ಎಂದರು.
ಇನ್ನು ಬಡವರ ಏಳಿಗೆ ಬಜೆಟ್ನ ಮೂಲ ಉದ್ದೇಶವಾಗಿದ್ದು, ಪ್ರತಿಯೊಬ್ಬರಿಗೂ ಮನೆ, ಶೌಚಾಲಯ ಸಿಗಬೇಕು. ಕೇಂದ್ರದ ಈ ಬಜೆಟ್ನಲ್ಲಿ 4 ಹಂತಗಳಲ್ಲಿ ಆಭಿವೃದ್ಧಿ ಯೋಜನೆಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.