ರಾಮನಗರ, ಫೆ 01 (DaijiworldNews/HR): 2022ರ ಕೇಂದ್ರ ಬಜೆಟ್ನಲ್ಲಿ ಹೊಸತೇನು ಇಲ್ಲ. ಹಸಿದವರ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿದಂತೆ ಇದೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, 2022ರ ಕೇಂದ್ರ ಬಜೆಟ್ನಲ್ಲಿ ಹೊಸ ರೀತಿಯ, ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಇಲ್ಲ. ಹಸಿದವರ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿದಂತೆ ಇದೆ ಎಂದಿದ್ದಾರೆ.
ಇನ್ನು ನದಿ ಜೋಡಣೆ ಯೋಜನೆಯನ್ನು ಕೇಂದ್ರ ಸರ್ಕಾರ ಅನೇಕ ವರ್ಷಗಳಿಂದಲೂ ಚರ್ಚಿಸುತ್ತಾ ಬಂದಿದ್ದು, ಈ ಬಾರಿಯ ಬಜೆಟ್ನಲ್ಲೂ ಅದನ್ನು ಪ್ರಸ್ತಾಪಿಸಿದ್ದಾರೆ ಅಷ್ಟೇ. ಅದನ್ನು ಹೊರತುಪಡಿಸಿ ಜನರಿಗೆ ಹೆಚ್ಚುವರಿ ತೆರಿಗೆಗಳ ಭಾರ ಹೊರಿಸಿಲ್ಲ ಎನ್ನುವುದೇ ಸಮಾಧಾನ ಎಂದು ಹೇಳಿದ್ದಾರೆ.