ನವದೆಹಲಿ, ಫೆ 01 (DaijiworldNews/HR): ಈ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 39.54 ಲಕ್ಷ ಕೋಟಿಯ ಬಜೆಟ್ ಮಂಡಿಸಿದ್ದು, ಈ ವರ್ಷ ಯಾವ ವಸ್ತು ದುಬಾರಿಯಾಗಿದೆ, ಯಾವ ವಸ್ತು ಬೆಲೆ ಇಳಿಕೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ಎಲೆಕ್ಟ್ರಾನಿಕ್ ವಸ್ತುಗಳ ಮೊಬೈಲ್, ಚಿನ್ನ ಅಗ್ಗ, ಬಟ್ಟೆ ಅಗ್ಗ, ಮೊಬೈಲ್ ಅಗ್ಗ, ಮೊಬೈಲ್ ಚಾರ್ಜರ್, ವಜ್ರಾಭರಣ, ಚಪ್ಪಲಿ, ಕೃಷಿ ಉಪಕರಣ, ವಿದೇಶಿ ಉತ್ಪನ್ನಗಳ ಬೆಲೆಯಲ್ಲಿ ಈ ಬಾರಿ ಇಳಿಕೆ ಮಾಡಲಾಗಿದ್ದು, ಔಷಧಗಳ ಮೇಲಿನ ಸುಂಕ, ಕಚ್ಚಾ ವಜ್ರದ ಮೇಲಿನ ಸುಂಕ ಶೇ.5ರಷ್ಟು ಇಳಿಕೆ ಮಾಡಲಾಗಿದೆ.
ಇನ್ನು ಪೆಟ್ರೋಲ್ ಬೆಲೆ ಇನ್ನಷ್ಟು ದುಬಾರಿ ಸಾಧ್ಯತೆ, ಅನ್ ಬ್ಲೆಂಡೆಡ್ ಇಂಧನಕ್ಕೆ ಹೆಚ್ಚುವರಿ 2 ರೂಪಾಯಿ ತೆರಿಗೆ. ಎಲ್ಲ ಆಮದು ಸರಕುಗಳು ಏರಿಕೆ, ಛತ್ರಿಗಳ ಬೆಲೆ ಏರಿಕೆ ಮಾಡಲಾಗಿದೆ.
ಉಳಿದಂತೆ ಈ ಬಾರಿಯ ಬಜೆಟ್ನಲ್ಲಿಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ ಈ ಹಿಂದೆ ಇದ್ದ ತೆರಿಗೆ ಪದ್ಧತಿಯನ್ನೇ ಮುಂದುವರೆಸಲಾಗಿದೆ.