ಚಿಕ್ಕಮಗಳೂರು, ಫೆ 01 (DaijiworldNews/KP): ಮದರಸದಿಂದ ಹಿಂತಿರುಗುತ್ತಿದ್ದ ವೇಳೆ ಜೀಪ್ ಢಿಕ್ಕಿಯಾಗಿ ಬಾಲಕಿಯೋರ್ವಳು ಸ್ಥಳದಲ್ಲೆ ಸಾವನ್ನಪ್ಪಿದ್ದ ದಾರುಣ ಘಟನೆ ಕಳಸ ಸಮೇಪದ ಕೋಟೆಹೊಳೆ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕಳಸ ಪಟ್ಟಣದ ಕಳಶೇಶ್ವರ ನಗರದ ವಜೀರ್ ಅಹಮದ್ ಎಂಬವರ ಪುತ್ರಿ ನಫಿಯಾ(9) ಅಪಘಾತದಲ್ಲಿ ಬಲಿಯಾದ ಬಾಲಕಿ.
ಮೂವರು ಮಕ್ಕಳು ಎಂದಿನಂತೆ ಮದರಸ ಪಾಠ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಕಳಸ ಪಟ್ಟಣದಿಂದ ಕಳಕೊಡು ಕಡೆಗೆ ವೇಗವಾಗಿ ಹೊಗುತ್ತಿದ್ದ ಜೀಪ್ ಮಕ್ಕಳಿಗೆ ಢಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಮೂವರು ಬಾಲಕಿಯ ಪೈಕಿ ನಫಿಯಾಗೆ ಜೀಪ್ ಬಲವಾಗಿ ಗುದ್ದಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಅಪಘಾತ ಎಸಗಿದ ಜೀಪ್ ಚಾಲಕನನ್ನು ಕಳಸ ಠಾಣಾ ಪೊಲೀಸರು ವಶ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಈ ರಸ್ತೆಯ ಕಾಮಗಾರಿ ಭಾನುವಾರವಷ್ಟೇ ಮುಗಿದಿದ್ದು, ರಸ್ತೆಯಲ್ಲಿ ಹಂಪ್ಸ್ ಹಾಕಿ ವೇಗ ನಿಯಂತ್ರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.