ನವದೆಹಲಿ, ಫೆ 01 (DaijiworldNews/HR): ಈ ಬಾರಿಯ ಬಜೆಟ್ನಲ್ಲಿ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ತೆರಿಗೆಯನ್ನು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದು, ಸಾರ್ವಜನಿಕರಿಗೆ ಭಾರೀ ನಿರಾಸೆಯಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು, ನೂತನ ತೆರಿಗೆ ನೀತಿಯನ್ನು ಪರಿಚಯಿಸಲಾಗುತ್ತಿದ್ದು, ತೆರಿಗೆ ಪಾವತಿಯಲ್ಲಿನ ತಪ್ಪು ಸರಿ ಪಡಿಸೋದಕ್ಕಾಗಿ 2 ವರ್ಷ ಕಾಲಾವಧಿಯ ಅವಕಾಶ ನೀಡಲಾಗುವುದು ಎಂದರು.
ಇನ್ನು ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದು, ಇದರ ನಡುವೆ ಸಹಕಾರಿ ಸಂಘಗಳ ಸರ್ಚ್ ಚಾರ್ಜ್ ಅನ್ನು ಶೇ.12 ರಿಂದ 7ಕ್ಕೆ ಇಳಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಚಪ್ಪಲಿ, ಬಟ್ಟೆಗಳ ಮೇಲಿನ ಬೆಲೆನ ತೆರಿಗೆ ಇಳಿಕೆ ಮಾಡಲಾಗಿದೆ. ಮೊಬೈಲ್, ಮೊಬೈಲ್ ಚಾರ್ಜರ್ ಮೇಲಿನ ತೆರಿಗೆ ಕೂಡ ಇಳಿಕೆ ಮಾಡಲಾಗಿದೆ. ಇನ್ನೂ ವಜ್ರಾಭರಣಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ.