ನವದೆಹಲಿ, ಫೆ 01 (DaijiworldNews/HR): ಸರ್ಕಾರವು ನಾಗರಿಕ-ಕೇಂದ್ರಿತ ಸುಧಾರಣೆಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಮುಂದಿನ 25 ವರ್ಷಗಳಲ್ಲಿ ಆರ್ಥಿಕತೆಯನ್ನು ಸುಧಾರಿಸುವ ಗುರಿಯನ್ನು ಈ ವರ್ಷದ ಬಜೆಟ್ ಹೊಂದಿದ್ದು, ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2022-23 ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಭಾರತವು ಈ ಆರ್ಥಿಕ ವರ್ಷದಲ್ಲಿ 9.2% ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದು, ಸರ್ಕಾರವು ನಾಗರಿಕ-ಕೇಂದ್ರಿತ ಸುಧಾರಣೆಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಮುಂದಿನ 25 ವರ್ಷಗಳಲ್ಲಿ ಆರ್ಥಿಕತೆಯನ್ನು ಸುಧಾರಿಸುವ ಗುರಿಯನ್ನು ಈ ಬಜೆಟ್ ಹೊಂದಿದೆ. ನಾವು ಓಮಿಕ್ರಾನ್ ಅಲೆಯ ಮಧ್ಯೆ ಇದ್ದು, ನಮ್ಮ ವ್ಯಾಕ್ಸಿನೇಷನ್ ಅಭಿಯಾನದ ವೇಗವು ಹೆಚ್ಚು ಸಹಾಯ ಮಾಡಿದೆ. 'ಸಬ್ಕಾ ಪ್ರಯಾಸ್', ನಾವು ಬಲವಾದ ಬೆಳವಣಿಗೆಯೊಂದಿಗೆ ಮುಂದುವರಿಯುತ್ತೇವೆ ಎಂಬ ವಿಶ್ವಾಸವಿದೆ ಎಂದರು.
ಇನ್ನು 2021-22ರ ಬಜೆಟ್ನಲ್ಲಿ ಸಾರ್ವಜನಿಕ ಹೂಡಿಕೆ ಮತ್ತು ಬಂಡವಾಳ ವೆಚ್ಚದಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಈ ಬಾರಿಯ ಬಜೆಟ್ ನಲ್ಲಿ ಯುವಕರು, ಮಹಿಳೆಯರು, ರೈತರು, ಎಸ್ಸಿ, ಎಸ್ಟಿ ವರ್ಗಕ್ಕೆ ಸಹಾಯವಾಗಲಿದೆ, ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಮಾರ್ಗದರ್ಶನ ನೀಡಲಿದೆ ಎಂದಿದ್ದಾರೆ.