ಬೆಂಗಳೂರು,ಫೆ 01 (DaijiworldNews/KP): ನಮ್ಮ ರಾಜ್ಯದ ಶಿಕ್ಷಣ ಇಲಾಖೆಯಿಂದ ಖಂಡಿತವಾಗಿ ನಟನ ಭಾವ ಚಿತ್ರವನ್ನು ಪ್ರಕಟಿಸಿಲ್ಲ, ಇದು ಖಾಸಗಿ ಪುಸ್ತಕ ಸಂಸ್ಥೆಯ ಪ್ರಕಟಿಸಿದೆ ಸಂಸದರ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ರಾಜ್ಯದ ತರಗತಿಯೊಂದರ ಪಠ್ಯ ಪುಸ್ತಕದಲ್ಲಿ ’ಅಂಚೆಯಣ್ಣ’ ಎಂಬ ಶೀಷಿಕೆಯಲ್ಲಿ ಮಲಯಾಳಂ ನಟನ ಪೋಟೋ ಹಾಕಿರುವುದು ಬಿಜೆಪಿ ಸರ್ಕಾರ ಕಾರ್ಯ ಎಂದು ಹೇಲಿಕೆ ನೀಡಿದ್ದ ಡಿ.ಕೆ.ಸುರೇಶ್ ಅವರ ಮಾತಿಗೆ ಫೇಸ್ಬುಕ್ನಲ್ಲಿ ಪ್ರತಿಕ್ರಿಯಿಸಿದ ಅವರು, ನಟನ ಭಾವ ಚಿತ್ರವನ್ನು ತೋರಿಸಿ ಅದನ್ನೂ ಕೂಡ ಮುದ್ರಿಸಿರುವುದು ಬಿಜೆಪಿ ಸರ್ಕಾರದ ಎಂದು ಶಾಲಾ ಪಠ್ಯ ಪುಸ್ತಕವನ್ನು ಕೇಸರಿಕರಣವೆಂದು ಬಣ್ಣಿಸುವ ನಿಮ್ಮ ಪ್ರಯತ್ನಕ್ಕೆ ಅರ್ಥವಿಲ್ಲ ಎಂದರು.
ಡಿ.ಕೆ.ಸುರೇಶ್ ಅವರೇ ಅಷ್ಟು ಧಾವಂತ ಬೇಡ, ಅವಸರವು ನಮ್ಮ ವಿವೇಚನೆಯನ್ನು ಕಸಿದುಕೊಳ್ಳುತ್ತದೆ ಎಂದರು.
ಸಂಸದರೇ ನಿಮ್ಮ ಗ್ರಹಿಕೆ ತಪ್ಪು, ಇದು ರಾಜ್ಯ ಸರ್ಕಾರದ ಪ್ರಕಟಿಸಿಲ್ಲ, ಬದಲಾಗಿ ಒಂದು ಖಾಸಗಿ ಪುಸ್ತಕ ಸಂಸ್ಥೆ ಪ್ರಕಟಿಸಿದೆ, ದಾರಿ ತಪ್ಪಿಸುವ ಕೆಲಸವೆಂದರೆ ಇದೆ ಇರಬೇಕು ಅಥವಾ ನೀವೇ ದಾರಿ ತಪ್ಪಿರಬೇಕು ಎಂದು ಟೀಕಿಸಿದರು.