ನವದೆಹಲಿ, ಜ 31(DaijiworldNews/MS): ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡುವಾಗ ತಮ್ಮ ಭಾಷಣಗಳಲ್ಲಿ ಬಳಸುವ ಜನಪ್ರಿಯ ಪದ 'ಮಿತ್ರೋ' ಅನ್ನು ಗೇಲಿ ಮಾಡಿದ್ದಾರೆ.
ಜನವರಿ 31, ಸೋಮವಾರದಂದು ತಮ್ಮ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಕುಟುಕಿ ಓಮಿಕ್ರಾನ್ ಗಿಂತ ‘ಓ ಮಿತ್ರೋ’ ತುಂಬಾ ಅಪಾಯಕಾರಿ ಎಂದು ಅವರು ಹೇಳಿದ್ದಾರೆ
"ಓ ಮಿತ್ರೋ ಎನ್ನುವುದು ಒಮಿಕ್ರಾನ್ ಗಿಂತ ಭಾರೀ ಅಪಾಯಕಾರಿ. ಹೆಚ್ಚಿದ ಧ್ರುವೀಕರಣ, ದ್ವೇಷ ಮತ್ತು ಧರ್ಮಾಂಧತೆಯ ಪ್ರಚಾರ, ಸಂವಿಧಾನದ ಮೇಲಿನ ಕಪಟ ದಾಳಿಗಳು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರಲ್ಲಿ ನಾವು ಪ್ರತಿದಿನದ ಪರಿಣಾಮಗಳನ್ನು ಕಾಣುತ್ತಿದ್ದೇವೆ. ಈ ವೈರಸ್ ನ ಯಾವುದೇ 'ಸೌಮ್ಯ ರೂಪಾಂತರ' ಇಲ್ಲ" ಎಂದು ಶಶಿ ತರೂರ್ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
'ಮಿತ್ರೋ' ಎಂಬ ಪದವನ್ನು ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಾಗಿ ಬಳಸುತ್ತಾರೆ. ತಮ್ಮ ಭಾಷಣವನ್ನು ಹೆಚ್ಚಾಗಿ ಈ ಪದದ ಮೂಲಕವೇ ಪ್ರಧಾನಿ ಮೋದಿ ಆರಂಭಿಸುತ್ತಾರೆ. ಶಶಿ ತರೂರ್ ಕಳೆದ ಕೆಲವು ದಿನಗಳಿಂದ ಭಾರತೀಯ ಜನತಾ ಪಕ್ಷ ಮತ್ತು ಅದರ ನಾಯಕರನ್ನು ಸೂಕ್ಷ್ಮವಾಗಿ ಕೆಣಕುತ್ತಿದ್ದಾರೆ.