ಲಖನೌ, ಜ 31 (DaijiworldNews/HR): ಉತ್ತರ ಪ್ರದೇಶದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನಿದಾ ಖಾನ್ ಮತ್ತು ಬಿಎಸ್ಪಿ ನಾಯಕಿ ಮಾಯಾವತಿ ಅವರ ಆಪ್ತರಾಗಿದ್ದ ಗಂಗಾರಾಮ್ ಅಂಬೇಡ್ಕರ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಿದಾ ಖಾನ್ ಅವರು ಬರೇಲ್ವಿ ಪಂಗಡದ ಧರ್ಮಗುರು ತೌಖೀರ್ ರಜಾ ಖಾನ್ರ ಸಹೋದರನ ಸೊಸೆಯಾಗಿದ್ದು, ತ್ರಿವಳಿ ತಲಾಖ್ನ ಸಂತ್ರಸ್ತೆಯಾಗಿದ್ದಾರೆ. ತ್ರಿವಳಿ ತಲಾಖ್ ವ್ಯವಸ್ಥೆಯ ಅಡಿಯಲ್ಲಿ ವಿಚ್ಛೇದನ ಹೊಂದಿರುವ ಮಹಿಳೆಯರಿಗೆ ಕಾನೂನು ಸಹಾಯ ಒದಗಿಸಲು ನಿದಾ ಅವರು ಕೆಲಸ ಮಾಡುತ್ತಾರೆ.
ಇನ್ನು ನಿದಾ ಅವರೊಂದಿಗೆ ಮಾಯಾವತಿಯವರಿಗೆ ಆಪ್ತರಾಗಿದ್ದ ಮಾಜಿ ಅಧಿಕಾರಿ ಮತ್ತು ಬಿಎಸ್ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಗಂಗಾರಾಮ್ ಅಂಬೇಡ್ಕರ್ ಸಹ ಬಿಜೆಪಿ ಸೇರಿದ್ದಾರೆ.
ಉತ್ತರ ಪ್ರದೇಶದ ವಿಧಾನಸಭೆಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.