ಬೆಂಗಳೂರು, ಜ 31 (DaijiworldNews/HR): ಡಿ.ಕೆ ಶಿವಕುಮಾರ್ ಹಾಗೂ ಸಚಿವ ಆನಂದ್ ಸಿಂಗ್ ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಬಿಜೆಪಿಯ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಅಂತ ಹೇಳಿದ್ದು, ಇದೀಗ ಸಚಿವ ಆನಂದ್ ಸಿಂಗ್ ಮತ್ತು ಡಿ.ಕೆ ಶಿವಕುಮಾರ್ ಭೇಟಿಯಾಗಿರುವ ಕುತೂಹಲ ಮೂಡಿಸಿದೆ.
ಇನ್ನು ಡಿ.ಕೆ ಶಿವಕುಮಾರ್ ಸಚಿವ ಆನಂದ್ ಸಿಂಗ್ ಮನೆಯಲ್ಲಿ ಭೇಟಿಯಾಗಿದ್ದು, ಮಹತ್ವದ ಚರ್ಚೆ ನಡೆಸಿದ್ದಾರೆ. ಈ ನಡುವೆ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಆನಂದ್ ಸಿಂಗ್ ಇದೊಂದು ಸೌಜ್ಯನವಾದ ಭೇಟಿ ಎಂದು ಹೇಳಿದ್ದಾರೆ.