ನವದೆಹಲಿ, ಜ 31(DaijiworldNews/MS): ಬಿಜೆಪಿ ನಾಯಕಿ ಮತ್ತು ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.ಸಂಸತ್ ಅಧಿವೇಶನಕ್ಕೆ ಕೆಲ ಗಂಟೆಗಳು ಬಾಕಿ ಇರುವಾಗಲೇ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಈ ಕುರಿತು ಭಾನುವಾರ ತಡರಾತ್ರಿ ಟ್ವೀಟ್ ಮಾಡಿರುವ ಅವರು, ‘ಇಂದು ನನಗೆ ಕೋವಿಡ್ ಇರುವುದು ದೃಢಪಟ್ಟಿದೆ. ನಾನೀಗ ವೈದ್ಯರ ಆರೈಕೆಯಲ್ಲಿದ್ದೇನೆ. ಕಳೆದ 2 ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಜಾಗರೂಕರಾಗಿರಿ. ಅಗತ್ಯವಿದ್ದರೆ ಪರೀಕ್ಷೆಗೆ ಒಳಗಾಗಿ. ನಿಮ್ಮ ಆರೋಗ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31 ರಿಂದ ಫೆಬ್ರುವರಿ 11ರ ವರೆಗೆ ನಡೆಯುತ್ತದೆ. ಮಾರ್ಚ್ 14 ರಂದು ಮತ್ತೆ ಆರಂಭವಾಗಲಿರುವ ಅಧಿವೇಶನ ಏಪ್ರಿಲ್ 8 ರವರೆಗೆ ನಡೆಯಲಿದೆ. ಫೆಬ್ರುವರಿ 1ರಂದು ಸರ್ಕಾರವು 2022-23 ನೇ ಸಾಲಿನ ಬಜೆಟ್ ಮಂಡಿಸಲಿದೆ.
ಕಳೆದ ವರ್ಷ, ಪ್ರಜ್ಞಾ ಸಿಂಗ್ ಠಾಕೂರ್ ಅವರು ಗೋಮೂತ್ರದ ಸಾರವು ಶ್ವಾಸಕೋಶದ ಸೋಂಕುಗಳು ಮತ್ತು ಕೊರೊನಾವೈರಸ್ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಹೇಳಿದ್ದರು. "ದೇಶಿ ಹಸುವಿನ 'ಗೋಮೂತ್ರದ ಸಾರಶ್ವಾಸಕೋಶದ ಸೋಂಕಿನಿಂದ ನಮ್ಮನ್ನು ದೂರವಿಡುತ್ತದೆ. ನಾನು ಬಹಳಷ್ಟುಆರೋಗ್ಯ ಸಮಸ್ಯೆಗಳಿಂದ ತೊಂದರೆಯಲ್ಲಿದ್ದೇನೆ ್ಆದರೆ ನಾನು ಪ್ರತಿದಿನ 'ಗೋಮೂತ್ರ ಆರ್ಕ' ತೆಗೆದುಕೊಳ್ಳುತ್ತೇನೆ. ನಾನು ಕರೋನವೈರಸ್ಗೆ ಬೇರೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಕಾಗಿಲ್ಲ, ನಾನು ಕರೋನವೈರಸ್ ಸೋಂಕಿನಿಂದ ಪ್ರಭಾವಿತವಾಗಿಲ್ಲ" ಎಂದು ಹೇಳಿದ್ದರು