ನವದೆಹಲಿ, ಜ 31 (DaijiworldNews/HR): 2024ರ ವೇಳೆಗೆ ಪಿಒಕೆ ಭಾರತದ ಭಾಗವಾಗಲಿದೆ ಎಂದು ಬಿಜೆಪಿ ಸಂಸದ ಹಾಗೂ ಕೇಂದ್ರ ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವ ಕಪಿಲ್ ಪಾಟೀಲ್ ಹೇಳಿಕೆ ನೀಡಿದ್ದು ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ.
ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2024 ರ ವೇಳೆಗೆ ಏನಾದರೂ ದೊಡ್ಡದು ಸಂಭವಿಸುತ್ತದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಭಾಗವಾಗಲಿದೆ ಎಂದು ನನಗೆ ಅನಿಸುತ್ತಿದೆ. ಮೋದಿಯಿಂದ ಮಾತ್ರ ಇವೆಲ್ಲಾ ಮಾಡಲು ಸಾಧ್ಯ, ಹಾಗಾಗಿ ಈರುಳ್ಳಿ, ಗೆಣಸು, ಸಿರಿಧಾನ್ಯಗಳ ಬೆಲೆಯಂತಹ ಸಣ್ಣಪುಟ್ಟ ವಿಚಾರಗಳ ಬಗ್ಗೆ ಯೋಚಿಸಬಾರದು" ಎಂದರು.
ಇನ್ನು ದೇಶವಿಲ್ಲದಿದ್ದರೆ ಈರುಳ್ಳಿ, ಆಲೂಗಡ್ಡೆಯನ್ನು ಎಲ್ಲಿಂದ ಖರೀದಿಸಬೇಕು? ಮೊದಲು ದೇಶವನ್ನು ಉಳಿಸಬೇಕು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ದೇಶವನ್ನು ಉಳಿಸುವ ಕಾರ್ಯವನ್ನು ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.