ನವದೆಹಲಿ, ಜ.31 (DaijiworldNews/KP): ಹಿಂದೂ ಧರ್ಮದ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ನೀಡುವ ನಿಟ್ಟಿನಲ್ಲಿ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಹೊಸ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ ಎಂದು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮುಖ್ಯಸ್ಥ ಡಾ.ವಿಜಯ್ ಶಂಕರ್ ಶುಕ್ಲಾ ಹೇಳಿದ್ದಾರೆ.
ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕೋರ್ಸ್ನಲ್ಲಿ ಹಿಂದೂ ಧರ್ಮದ ಅನೇಕ ಅಪರಿಚಿತ ಅಂಶಗಳ ಬಗ್ಗೆ ಜಗತ್ತಿಗೆ ಅರಿವು ಮೂಡಿಸಲು ಮತ್ತು ಹೆಚ್ಚಿನ ಜನರಿಗೆ ಹಿಂದೂ ಧರ್ಮವನ್ನು ಕಲಿಯಬೇಕು ಎಂಬ ಆಸಕ್ತಿ ಇರುತ್ತದೆ, ಅಂತಹವರಿಗೆ ಇದು ಸಹಾಯ ಮಾಡುತ್ತದೆ. ಹಿಂದೂ ಧರ್ಮದ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ನೀಡುವ ನಿಟ್ಟಿನಲ್ಲಿ ಎಂಎ ಕೋರ್ಸ್ನಲ್ಲಿ ಹಿಂದೂ ಅಧ್ಯಯನ ಎಂಬ ಹೊಸ ಕೋರ್ಸ್ ಪ್ರಾರಂಭಿಸಿದ್ದು, ಉತ್ತರ ಪ್ರದೇಶದ ಬಿಹೆಚ್ಯು ಪ್ರಕಾರ, ಸ್ನಾತಕೋತ್ತರ ಕೋರ್ಸ್ನಲ್ಲಿ ಈ ರೀತಿಯ ಬದಲಾವಣೆ ಇದೇ ಮೊದಲು, ಸದ್ಯ ಈ ಕೋರ್ಸ್ನ ಮೊದಲ ಬ್ಯಾಚ್ಗೆ ವಿದೇಶಿ ವಿದ್ಯಾರ್ಥಿ ಸೇರಿದಂತೆ ಒಟ್ಟು 45 ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ಇದು ರಾಷ್ಟ್ರೀಯ ಶಿಕ್ಷಣ ನೀತಿ, 2020ಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಅಂತರಶಿಸ್ತೀಯ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮವನ್ನು ಭಾರತ್ ಅಧ್ಯಯನ ಕೇಂದ್ರ, ತತ್ವಶಾಸ್ತ್ರ ಮತ್ತು ಧರ್ಮ ಇಲಾಖೆ, ಸಂಸ್ಕೃತ ಇಲಾಖೆ ಮತ್ತು ಪ್ರಾಚೀನ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವ ಇಲಾಖೆ, ಕಲಾ ವಿಭಾಗದ ಅಡಿಯಲ್ಲಿ ನೀಡಲಾಗಿದೆ ಎಂದು ಹೇಳಿದರು.