ನವದೆಹಲಿ, ಜ 31(DaijiworldNews/MS): ಭಾರತದಲ್ಲಿ ದಾಖಲಾಗುತ್ತಿರುವ ದೈನಂದಿನ ಹೊಸ ಕೋವಿಡ್ ಪ್ರಕರಣ ನಿನ್ನೆಗೆ ಹೋಲಿಸಿದರೆ ಶೇ. 10ರಷ್ಟು ಕಡಿಮೆಯಾಗಿದೆ.
ಭಾರತದಲ್ಲಿ ಇಂದು 2,09,918 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 959 ಸಾವಿನ ಪ್ರಕರಣ ವರದಿಯಾಗಿದೆ. ಇನ್ನು ಕೋವಿಡ್ ಸಕಾರಾತ್ಮಕತೆಯ ದರವು 14.5% ರಿಂದ 15.7% ಕ್ಕೆ ಏರಿದೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 18,31,268 ರಷ್ಟಿದೆ.
ಭಾರತವು ಡಿಸೆಂಬರ್ 19, 2020 ರಂದು ಪ್ರಕರಣಗಳ ಸಂಖ್ಯೆಯಲ್ಲಿ ಒಂದು ಕೋಟಿಯ ಗಡಿಯನ್ನು ಮೀರಿದೆ. ಇದು ಮೇ 4ರಂದು ಎರಡು ಕೋಟಿ ಮತ್ತು ಜೂನ್ 23 ರಂದು ಮೂರು ಕೋಟಿಯ ಮೈಲಿಗಲ್ಲನ್ನು ದಾಟಿದೆ.