ಹುಬ್ಬಳ್ಳಿ, ಜ.30 (DaijiworldNews/KP): ನಾಳೆಯೇ ವಿಧಾನ ಪರಿಷತ್ಗೆ ರಾಜೀನಾಮೆ ಸಲ್ಲಿಸುತ್ತೇನೆ, ನನ್ನ ಮನಸ್ಸು ನೋಯಿಸಿದವರಿಗೆ ಒಳ್ಳೆಯದಾಗಲಿ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಇಬ್ರಾಹಿಂ ಪಕ್ಷವನ್ನು ತೊರೆಯವ ಬಗ್ಗೆ ಎರಡು ದಿನಗಳಯಷ್ಟೇ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಇಂದು ಪರಿಷತ್ ಸ್ಥಾನಕ್ಕೆ ನಾಳೆ ರಾಜೀನಾಮೆ ಸಲ್ಲಿಸೋದಾಗಿ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ದೊಡ್ಡವರು, ನಮ್ಮಂತವರನ್ನೆಲ್ಲಾ ಮಾತನಾಡಿಸುವುದಿಲ್ಲ, ಈ ಸಮಸ್ಯೆಯ ಬಗ್ಗೆ ಆರು ತಿಂಗಳ ಹಿಂದೆಯೇ ಸರಿ ಮಾಡೋದಾಗಿ ಹೇಳಿದ್ದರು, ಆದರೆ ಈವರೆಗೂ ಸುದ್ದಿ ಇಲ್ಲ, ಇನ್ನು ಸಿದ್ದರಾಮಯ್ಯ ನನ್ನ ಆತ್ಮೀಯ, ಸ್ನೇಹಿತ ಏನ್ನುತ್ತಾರೆ, ಇದೇನಾ ಆತ್ಮೀಯತೆ ಎಂದರೆ ಎಂದು ಪ್ರಶ್ನಿಸಿದರು.
ನನ್ನ ಮನಸ್ಸು ನೋಯಿಸಿದವರಿಗೆಲ್ಲ ಒಳ್ಳೆಯದಾಗಲಿ, ಕಾಂಗ್ರೆಸ್ ನನಗೆಂದು ಕೊಟ್ಟಿದ್ದ ಎಂ.ಎಲ್.ಸಿ. ಸ್ಥಾನವೂ ನನಗೆ ಬೇಕಾಗಿಲ್ಲ ಎಂದರು.