ವಿಜಯಪುರ, ಜ.30 (DaijiworldNews/KP): ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬುದು ಶುದ್ದ ಸುಳ್ಳು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲಿದ್ದಾರೆ ಎಂಬ ಲಖನ್ ಜಾರಕಿಹೊಳಿ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಅವರು, ಲಕ್ಷ್ಮಣ ಸವದಿ ಕಾಂಗ್ರೆಸ್ನವರ ಜೊತೆ ಸಂಪರ್ಕದಲ್ಲಿರುವಷ್ಟು ಕೀಳು ರಾಜಕಾರಣಿ ಅಲ್ಲ, ಅವರು ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎನ್ನುವುದು ಸುಳ್ಳು ಅವರು ಬಿಜೆಪಿಯಲ್ಲೇ ಇರುತ್ತಾರೆ ಎಂದರು.
ಇನ್ನು ಚುನಾವಣಾ ಪರ್ವ ಇರುವ ಕಾಲದಲ್ಲಿ ಯಾರು ಯಾರ ಜೊತೆ ಹೊಂದಾಣಿಕೆಯಲ್ಲಿ ಇದ್ದಾರೊ ಗೊತ್ತಿಲ್ಲ ಎಂದು ಲಖನ್ ಜಾರಕಿಹೊಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಮುರುಗೇಶ್ ನಿರಾಣಿಯನ್ನು ಬಿಜೆಪಿಗೆ ಕರೆ ತಂದು ಟಿಕೆಟ್ ಕೊಡಿಸಿದ್ದೇ ನಾನು, ಅಂತವರಿಗೆ ಅಂಜಿ ನಾನು ರಾಜಕಾರಣ ಮಾಡಲ್ಲ. ಅವನನ್ನು ಯಾಕೆ ನನಗೆ ಹೋಲಿಕೆ ಮಾಡುತ್ತಿರ ಎಂದು ನಿರಾಣಿ ವಿರುದ್ದ ಕಿಡಿಕಾರಿದ್ದಾರೆ.