ದೆಹಲಿ, ಜ 30 (DaijiworldNews/HR): ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ 'ಮನ್ ಕಿ ಬಾತ್' ಅನ್ನು ಪೋಸ್ಟ್ ಕಾರ್ಡ್ ಮೂಲಕ ನನಗೆ ಕಳುಹಿಸಿದ್ದು, ಈ ಪೋಸ್ಟ್ ಕಾರ್ಡ್ಗಳು ದೇಶದ ಹಲವು ಭಾಗಗಳಿಂದ ಮತ್ತು ವಿದೇಶಗಳಿಂದಲೂ ಬಂದಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಂದು ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' 85 ನೇ ಸಂಚಿಕೆಯಲ್ಲಿ ಮೊದಲಿಗೆ ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಅವರಿಗೆ ನಮನ ಸಲ್ಲಿಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿ ಅವರು, 'ಇದು 2022 ರ ಮೊದಲ ಮನ್ ಕಿ ಬಾತ್, ಇಂದು ನಾವು ನಮ್ಮ ನಾಗರಿಕರ ಸ್ಪೂರ್ತಿದಾಯಕ ಕಥೆಗಳನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ' ಎಂದರು.
ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಬೇಕು. ಇದರಿಂದ 'ನೀವು ವಿಶೇಷ ರೀತಿಯ ಶಕ್ತಿ ಮತ್ತು ಸ್ಫೂರ್ತಿಯನ್ನು ಅನುಭವಿಸುವಿರಿ ಎಂದಿದ್ದಾರೆ.
ಇನ್ನು ಭಾರತೀಯ ಸಶಸ್ತ್ರ ಪಡೆಗಳಲ್ಲಿನ 'ಜವಾನರಿಂದ' ನಾನು ಸ್ವೀಕರಿಸಿದ ಕೆಲವು ಪತ್ರಗಳು 'ಅಮರ್ ಜವಾನ್ ಜ್ಯೋತಿ'ಯ ಪ್ರಾಮುಖ್ಯತೆ ಮತ್ತು ನಮ್ಮ ಹುತಾತ್ಮರು ಮತ್ತು ಅವರ ಕುಟುಂಬಗಳ ಜೀವನದಲ್ಲಿ ಅದು ಹೊಂದಿರುವ ಮಹತ್ವವನ್ನು ಒತ್ತಿಹೇಳುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಭಾರತವನ್ನು ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರೆಂದು ಹೇಗೆ ನೆನಪಿಸಿಕೊಳ್ಳಬೇಕು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಯುವಕರಿಂದ ಅವರು ಒಂದು ಕೋಟಿಗೂ ಹೆಚ್ಚು ಪೋಸ್ಟ್ಕಾರ್ಡ್ಗಳನ್ನು ಸ್ವೀಕರಿಸಿದ್ದಾರೆ ಎಂದರು.
ಇನ್ನು ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಮನ್ ಕಿ ಬಾತ್ ಅನ್ನು ಭಾರತ ಮತ್ತು ಪ್ರಪಂಚದಾದ್ಯಂತ ಪೋಸ್ಟ್ಕಾರ್ಡ್ಗಳ ಮೂಲಕ ಹಂಚಿಕೊಂಡಿದ್ದು ನಮ್ಮ ಯುವಕರು ಹೊಂದಿರುವ ಆಲೋಚನೆಗಳು ಮತ್ತು ಅವರು ತಮ್ಮ ಕನಸಿನ ಭಾರತವನ್ನು ಹೇಗೆ ರೂಪಿಸುತ್ತಾರೆ ಎಂಬುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ ಎಂದರು.