ಬೆಂಗಳೂರು, ಜ 30 (DaijiworldNews/HR): ಕಾಂಗ್ರೆಸ್ನ ಬೀದಿನಾಟಕ ಬಯಲಾಗಿದ್ದು, ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಸುಕಿನ ಗುದ್ದಾಟ ಈಗ ಬಯಲಾಗಿದೆ. ಸಿದ್ದರಾಮಯ್ಯಗಿಂತ ಮೇಲಿದ್ದೇನೆ ಎಂದು ತೋರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಂದ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು "ನಾವು ಈ ಮಾತು ಹೇಳಿದಾಗ ಡಿ.ಕೆ.ಶಿವಕುಮಾರ್ ಅವರು ನಾವೆಲ್ಲಾ ಒಂದು ಒಂದು ಹೇಳಿದ್ದರು. ಅದರೆ ಇದೀಗ ಕಾಂಗ್ರೆಸ್ ನ ಬೀದಿನಾಟಕ ಬಯಲಾಗಿದೆ" ಎಂದು ಹೇಳಿದ್ದಾರೆ.