ಬೆಂಗಳೂರು, ಜ.30 (DaijiworldNews/KP): ಕಾಂಗ್ರೆಸ್ ಪಕ್ಷವನ್ನು ಜನರು ಹೀನಾಯವಾಗಿ ಸೋಲಿಸಿದ್ದಾರೆ, ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಗೋವಿಂದ್ ಕಾರಜೋಳ ಹೇಳಿದ್ದಾರೆ.
ಯೋಜನೆಗಳಿಗೆ ಹೆಸರು ಬದಲಾಯಿಸಿದ್ದೇ ಬಿಜೆಪಿಯ ಸಾಧನೆ ಎಂಬ ಮಾಜಿ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೊರೊನಾ ಪ್ರವಾಸ ಇರಲಿಲ್ಲ, ಆದರೂ ಕೂಡ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಲಿಲ್ಲ. ಅವರು ಯವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದು ಜನರೇ ತಿರಸ್ಕರಿಸಿದ್ದಾರೆ ಇದನ್ನಾದರೂ ಅರ್ಥ ಮಾಡಿಕೊಳ್ಳಿ ಎಂದರು.
ಬಿಜೆಪಿಯ ಯಾವ ಶಾಸಕರೂ ಕೂಡ ಕಾಂಗ್ರೆಸ್ ಹೋಗುವುದಿಲ್ಲ, ಬಿಜೆಪಿಯಲ್ಲಿ ವಲಸೆ ಶಾಸಕರು ಎಂದು ಯಾರು ಇಲ್ಲ, ಬಿಜೆಪಿಗೆ ಬಂದವರೆಲ್ಲ ಸದಸ್ಯತ್ವ ಪಡೆದುಕೊಂಡಿದ್ದಾರೆ, ಕಾಂಗ್ರೆಸ್ ಪಕ್ಷವು ಮುಳುಗುವ ಹಡಗು ಹಾಗಿರುವಾಗ ಬಿಜೆಪಿಯವರು ಈ ಪಕ್ಷ ಬಿಟ್ಟು ಆ ಪಕ್ಷಕ್ಕೆ ಯಾಕೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.
ಇನ್ನು ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಹಾಗೂ ಶಿವಶಂಕರಪ್ಪ ಎಂಬ ಮೂರು ಗುಂಪುಗಳಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎಣ್ಣೆ ನೀರು ಇದ್ದಂತೆ ಅವರು ಎಂದಿಗೂ ಸೇರಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.