ಬೆಂಗಳೂರು, ಜ.29 (DaijiworldNews/KP): 2018ರ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿತ್ತು, ಆದರೆ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಭರವಸೆಯನ್ನು ಮರೆತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷವಾಗಿದೆ, ಬಿಎಸ್ವೈ ಸಂಪುಟದಲ್ಲಿ ಸಚಿವರಾಗಿದ್ದ ಬೊಮ್ಮಾಯಿ ಇದೀಗಾ ಸಿಎಂ ಆಗಿ 6 ತಿಂಗಳು ಪೂರೈಸಿದ್ದು, ಆದರೆ 2018ರ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ ನೀರಾವರಿಗಾಗಿ 6,300 ಕೋಟಿ ಖರ್ಚು ಮಾಡಿದ್ದೇವೆಂದು ಉಲ್ಲೇಖ ಮಾಡಿದ್ದರು. ನಂತರ 5 ವರ್ಷದಲ್ಲಿ 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದರು, ಆದರೆ ಇಲ್ಲಿಯವರೆಗೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಬಿಜೆಪಿಯವರು ಮರೆತಿದ್ದಾರೆ ಎಂದರು.
ಇನ್ನು ಸಿಎಂ ಬೊಮ್ಮಾಯಿ ನಿನ್ನೆ ಸುಂದರವಾದ ಪುಸ್ತಕ ಬಿಡುಗಡೆ ಮಾಡಿದ್ದರು, ಆದರೆ ಸುಂದರ ಪುಸ್ತಕದಲ್ಲಿ ಸಾಧನೆಗಿಂತ ಭರವಸೆಗಳೇ ಹೆಚ್ಚಾಗಿವೆ. ಹಲವಾರು ಹಳೆಯ ಕಾರ್ಯಕ್ರಮಗಳಿಗೆ ಹೆಸರು ಬದಲಿಸಿದ್ದಾರೆ ಹೊರತು ಬೇರೆನಿಲ್ಲ. ಹೆಸರು ಬದಲಾವಣೆ ಮಾಡಿರೊದೇ ಬಿಜೆಪಿಯವರ ಸಾಧನೆ ಎಂದು ತಿಳಿಸಿದ್ದಾರೆ.