ಮುಂಬೈ, ಜ.29 (DaijiworldNews/KP): ದೇಶದಾದ್ಯಂತ ಕೊರೊನಾದ ಮೂರನೆ ಅಲೆಯ ಅಬ್ಬರ ಹೆಚ್ಚಾಗಿದ್ದು, ಅದರೊಂದಿಗೆ ಇದೀಗ ಮುಂಬೈನ 70 ವರ್ಷದ ವ್ಯಕ್ತಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ
70ವರ್ಷದ ವ್ಯಕ್ತಿಗೆ ಜನವರಿ 5ರಂದು ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊರೊನಾ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದ್ದು, ಬಳಿಕ ಜನವರಿ 12ರಂದು ಬ್ಲ್ಯಾಕ್ ಫಂಗಸ್ ಸೋಂಕಿನ ಲಕ್ಷಣವು ಕಂಡು ಬಂದಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ನಡುವೆಯು ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ಸದ್ಯ ಇವರನ್ನು ಮುಂಬೈ ಸೆಂಟ್ರಲ್ ನ ವೊಕ್ಹಾರ್ಡ್ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.