ಪಣಜಿ, ಜ.29 (DaijiworldNews/KP): ಡಿಕೆಶಿ ಬಾಯಿಯಲ್ಲಿ ಬರುವ ಭ್ರಷ್ಟಾಚಾರ ಮಾತಿಗೂ, ಭೂತದ ಬಾಯಲ್ಲಿ ಬರುವ ಭಗವದ್ಗೀತೆಗೂ ವ್ಯತ್ಯಾಸವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವಿತ್ತು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು ಡಿಕೆಶಿ ಭ್ರಷ್ಟಚಾರ ಕೇಸ್ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದವರು ಹೀಗಿರುವಾಗ ಅವರ ಬಾಯಿಯಲ್ಲಿ ಬಂದಿರುವ ಭ್ರಷ್ಟಚಾರ ಮಾತಿಗೂ, ಭೂತದ ಬಾಯಲ್ಲಿ ಬರುವ ಭಗವದ್ಗೀತೆಗೂ ವ್ಯತ್ಯಾಸ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಕಾಂಗ್ರೆಸ್ ನಿಂದ ಗೋವಾ ಜನತೆ ಪಾಠ ಕೇಳುವ ಸ್ಥಿತಿ ಇನ್ನು ಬಂದೊದಗಿಲ್ಲ ಎಂದರು.
ಗೋವಾದಲ್ಲಿ ಚುನಾವಣೆ ಸಮೀಪಿಸಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪಣಜಿಯಲ್ಲಿ ಬೀಡುಬಿಟ್ಟಿದ್ದಾರೆ. ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ಚುನಾವಣಾ ಅಖಾಡ ರಂಗೇರಿದೆ.