ನವದೆಹಲಿ, ಜ 29 (DaijiworldNews/HR): ಚೀನಾ ಆಕ್ರಮಿಸಿಕೊಂಡ ಭಾರತ ಭೂಭಾಗವನ್ನು ಯಾವಾಗ ಹಿಂದಿರುಗಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಅರುಣಾಚಲ ಪ್ರದೇಶದ ಬಾಲಕನನ್ನು ಚೀನಾ ಸೇನೆ ಅಪಹರಿಸಿ, ಮರಳಿಸಿರುವುದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಮಿರಾಮ್ ತಾರೊನ್ ಅವರನ್ನು ಮರಳಿಸಿದ್ದು ನನಗೆ ಸಮಾಧಾನ ತಂದಿದೆ. ಆದರೆ ಚೀನಾ ಆಕ್ರಮಿಸಿಕೊಂಡಿರುವ ಭಾರತದ ಭೂಪ್ರದೇಶವನ್ನು ನಾವು ಯಾವಾಗ ಪಡೆದುಕೊಳ್ಳಲಿದ್ದೇವೆ, ಪ್ರಧಾನಮಂತ್ರಿಯವರೇ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದೆ ಆಗಿದ್ದರೆ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ. ಮಿರಾಮ್ ತಾರೊನ್ ಅನ್ನು ಮರಳಿ ತನ್ನಿ! ಎಂದು ಚೀನಾ ಸೇನೆಯು ಬಾಲಕನನ್ನು ಮರಳಿಸಿರುವುದಕ್ಕೂ ಮುನ್ನ ರಾಹುಲ್ ಟ್ವಿಟರ್ನಲ್ಲಿ ಹೇಳಿದ್ದರು.