ಲಖನೌ, ಜ. 28 (DaijiworldNews/SM):ಉತ್ತರ ಪ್ರದೇಶದ ಮುಜಾಫರ್ನಗರಕ್ಕೆ ತೆರಳಲು ನನಗೆ ಅವಕಾಶವಿಲ್ಲ. ದೆಹಲಿಯಲ್ಲಿ ನನ್ನನ್ನು ತಡೆಯಲಾಗಿದೆ. ನಾನು ಪ್ರಯಾಣಿಸುತ್ತಿರುವ ಹೆಲಿಕಾಪ್ಟರ್ ಗೆ ಅನುಮತಿ ನೀಡುತ್ತಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ. ಹಾಗೂ ಇದಕ್ಕೆ ಸಂಬಂಧಿಸಿದ ಪೋಟೋವೊಂದನ್ನು ಅವರು ಅಪ್ ಲೋಡ್ ಮಾಡಿದ್ದಾರೆ.
"ಯಾವುದೇ ಕಾರಣ ನೀಡದೆ ನನ್ನ ಹೆಲಿಕಾಪ್ಟರ್ ಮುಜಾಫರ್ನಗರಕ್ಕೆ ಹಾರಲು ಅನುಮತಿ ನೀಡದೆ ದೆಹಲಿಯಲ್ಲಿ ಇನ್ನೂ ಬಂಧಿಸಲಾಗಿದೆ. ಇದು ಸೋತ ಬಿಜೆಪಿಯ ಹತಾಶೆಯ ನಿರ್ಧಾರ ಎಂದು ಅವರು ಆರೋಪಿಸಿದ್ದಾರೆ.