ಬೆಂಗಳೂರು, ಜ 28 (DaijiworldNews/HR): ಕಾಂಗ್ರೆಸ್ನ ಸದ್ಯದ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ 20 ಜನ ನನ್ನ ಸಂಪರ್ಕದಲ್ಲಿ ಇದ್ದಾರೆ ಅಂತ. ಡಿಕೆ ಶಿವಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ್ದರು. ಆದರೆ ಸಿಎಂ ಇಬ್ರಾಹಿಂ ಅವರ ನಿರ್ಧಾರದಿಂದಾಗಿ ಅವರ ಮನೆಯ ದಿಡ್ಡಿ ಬಾಗಿಲೆ ಕಿತ್ತುಕೊಂಡು ಹೋಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು "ಸಿಎಂ ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರನ್ನು ಪಾರ್ಟಿಗೆ ತರುವ ಕೆಲಸ, ಮುಖ್ಯಮಂತ್ರಿಯಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಸಿ ಎಂ ಇಬ್ರಾಹಿಂ ಅವರೇ ಪಾರ್ಟಿ ಬಿಟ್ಟಿದ್ದಾರೆ. ಅವರ ಪಾರ್ಟಿಯೇ ಮನೆಯೊಂದು ಮೂರು ಬಾಗಿಲಾಗಿದೆ" ಎಂದಿದ್ದಾರೆ.