ಬೆಂಗಳೂರು, ಜ 28 (DaijiworldNews/HR): ಜೆಡಿಎಸ್ ಪಕ್ಷವನ್ನು ಮುಗಿಸುವ ಬಗ್ಗೆ ಯೋಚನೆ ಕಾಂಗ್ರೆಸ್ ಮತ್ತು ಬಿಜೆಪಿಯದ್ದು ತಿರುಕನ ಕನಸು, ದೇವೇಗೌಡರು ಬದುಕಿರುವವರೆಗೂ ಜೆಡಿಎಸ್ ಪಕ್ಷವನ್ನು ಮುಗಿಸಲೂ ಯಾರಿಂದಲೂ ಸಾಧ್ಯವಿಲ್ಲ ಎಂದು ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಾಸನದಲ್ಲಿ ನನ್ನ ಮಗನಿಗೆ ಜನ ಆಶೀರ್ವಾದ ಮಾಡಿದ್ದಾರೆ. ದೇವೇಗೌಡರಿಗೆ ಚಾಕು ಹಾಕಿದವರೆಲ್ಲ ಏನೇನೋ ಆಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ಗೆ ತಿರುಕನ ಕನಸು ಕಾಣುತ್ತಿವೆ ಎಂದರು.
ಇನ್ನು ಕಾಂಗ್ರೆಸ್ನವರು ದೇವೇಗೌಡ, ಕುಮಾರಸ್ವಾಮಿಯ ಭಜನೆ ಮಾಡುತ್ತಲೆ ಇರುತ್ತಾರೆ. ಸಿಎಂ ಇಬ್ರಾಹಿಂ ಜೆಡಿಎಸ್ ಗೆ ಬರುವ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ತೀರ್ಮಾನಿಸುತ್ತಾರೆ, ನನ್ನದೇನೂ ಇಲ್ಲ ಎಂದು ಹೇಳಿದ್ದಾರೆ.