ಬೆಂಗಳೂರು, ಜ 28 (DaijiworldNews/HR): ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, "ಸವಾಲು ಎದುರಿಸಬಲ್ಲಿ ಆತ್ಮವಿಶ್ವಸ ನಮಗೆ ಕೇವಲ 6 ತಿಂಗಳ ಅವಧಿಯಲ್ಲಿ ಬಂದಿದ್ದು, ರಾಜ್ಯದ ಜನರಿಟ್ಟಿರುವ ವಿಶ್ವಾಸಕ್ಕೆ ಗೌರವ ಬರುವಂತೆ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಒಳ್ಳೆಯ ಸಚಿವ ಸಂಪುಟ ಇದೆ. ಕೊರೊನಾ ಸಮಯದಲ್ಲಿ ಹಲವರು ಉತ್ತಮ ಕೆಲಸ ಮಾಡಿದ್ದಾರೆ. ಅಂತಹವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನನ್ನ ಧರ್ಮ" ಎಂದರು.
ಇನ್ನು ಸರ್ಕಾರಕ್ಕೆ ಎಷ್ಟೇ ಕಷ್ಟಬಂದರೂ, ಎಷ್ಟೇ ಹಣದ ಸಂಕಷ್ಟ ಬಂದರೂ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವುದಿಲ್ಲ. 14 ಲಕ್ಷ ರೈತರಿಗೆ ಪರಿಹಾರ ನೀಡಿದ್ದೇವೆ. ವಿಶೇಷ ಚೇತನರಿಗೆ ಮಾಸಿಕ 800 ರೂ. ಹೆಚ್ಚಿಸಿದ್ದೇವೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿಯನ್ನು 1,200 ರೂ.ಗೆ ಹೆಚ್ಚಳ ಮಾಡಲಾಗಿದೆ. ರೈತರ ಮಕ್ಕಳಿಗಾಗಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ.