ನವದೆಹಲಿ, ಜ 28 (DaijiworldNews/HR): ಪಂಜಾಬ್ನ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ನಡೆದ ಶೂಟೌಟ್ನಲ್ಲಿ ಭದ್ರತಾ ಪಡೆಯು ಕಳ್ಳಸಾಗಣೆಯ ಪ್ರಮುಖ ಯತ್ನವನ್ನು ವಿಫಲಗೊಳಿಸಿ ಪಾಕ್ ಸ್ಮಗ್ಲರ್ಗಳಿಂದ 47 ಕೆ.ಜಿ ಹೆರಾಯಿನ್, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.
ಪಂಜಾಬ್ನ ಗುರುದಾಸಪುರ ಸೆಕ್ಟರ್ನ ಭಾರತ-ಪಾಕ್ ಅಂತರರಾಷ್ಟ್ರೀಯ ಗಡಿ ಬಳಿಯಲ್ಲಿ ಉಗ್ರರು ಮತ್ತು ಬಿಎಸ್ಎಫ್ ಯೋಧರ ನಡುವೆ ನಡೆದ ಶೂಟೌಟ್ನಲ್ಲಿ ಓರ್ವ ಬಿಎಸ್ಎಫ್ ಯೋಧ ಗಾಯಗೊಂಡಿದ್ದಾರೆ.
ಇನ್ನು ಚಂದು ವಡಾಲಾ ಬಾರ್ಡರ್ ಪೋಸ್ಟ್ ಬಳಿ ಗಸ್ತು ತಿರುಗುತ್ತಿದ್ದ ಬಿಎಸ್ಎಫ್ ತಂಡವು ಅನುಮಾನಾಸ್ಪದ ಚಲನವಲನವನ್ನು ಗಮನಿಸಿ ಕಳ್ಳಸಾಗಣೆಯನ್ನು ತಡೆಯಲು ಯಶಸ್ವಿಯಾಗಿದೆ.