ಬಳ್ಳಾರಿ, ಜ 28 (DaijiworldNews/HR): ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಇಬ್ರಾಹಿಂ ಅವರು ಚಲಾವಣೆಯಲ್ಲಿರುವಂತಹ ನಾಣ್ಯ. ಅವರಿಗೆ ತುಂಬಾ ಬೇಡಿಕೆ ಇದೆ. ಅವರು ಬಿಜೆಪಿಗೆ ಬರುತ್ತಾರೆಂದರೆ ನಮ್ಮ ನಾಯಕರು ಬೇಡ ಎನ್ನುವುದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು. ಸಿ.ಎಂ. ಇಬ್ರಾಹಿಂ ನನ್ನ ಜೊತೆ ಅನೇಕ ಬಾರಿ ಮಾತಾಡಿದ್ದಾರೆ. ಕಾಂಗ್ರೆಸ್ ಬಿಡುವುದಾಗಿ ಇಬ್ರಾಹಿಂ ಹಲವು ಬಾರಿ ಹೇಳಿದ್ದಾರೆ. ಅವರನ್ನು ಬಿಜೆಪಿಗೆ ಕರೆತರಲು ನಾಯಕರೊಂದಿಗೆ ಚರ್ಚಿಸುತ್ತೇನೆ ಎಂದರು.
ಇನ್ನು ಇಬ್ರಾಹಿಂ ಅವರಿಗೆ ಯಾವ ಪಕ್ಷದಲ್ಲಿಯೂ ಅವಕಾಶ ಸಿಗಬಹುದು ಹಾಗಾಗಿ ನಮ್ಮ ಪಕ್ಷಕ್ಕೆ ಬರುತ್ತಾರೆಂದರೆ ನಮ್ಮ ನಾಯಕರು ಬೇಡ ಎನ್ನುವುದಿಲ್ಲ ಎಂದು ಹೇಳಿದ್ದಾರೆ.