ಬೆಂಗಳೂರು, ಜ 28 (DaijiworldNews/HR): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇಂದು ಸರ್ಕಾರದ ಸಾಧನೆ ತಿಳಿಸುವ ಕೈಪಿಡಿ ಬಿಡುಗಡೆ ಮಾಡಲಾಗುವುದು.
2021 ಜುಲೈ 28 ರಂದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಅನೇಕ ಯೋಜನೆ ಜಾರಿಗೆ ತಂದಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮದು ಸ್ಪಂದನಶೀಲ ಸರ್ಕಾರವಾಗಿದ್ದು, ಇದಕ್ಕೆ 100 ದಿನ ಅಥವಾ ಆರು ತಿಂಗಳು ಅಥವಾ ಯಾವುದೇ ಸಮಯ ಮುಖ್ಯವಲ್ಲ, ನಿರಂತರವಾಗಿ ಜನರ ಅಗತ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಆರು ತಿಂಗಳು ಪೂರ್ಣಗೊಂಡಿರುವ ಪಕ್ಷಿನೋಟ ತಿಳಿಸಲು ಕೈಪಿಡಿ ಬಿಡುಗಡೆ ಮಾಡಲಾಗುವುದು ಎಂದರು.
ಇನ್ನು ನಾನು ಇಲ್ಲಿವರೆಗೂ ಎಂದೂ ಕೂಡ ಜನ್ಮದಿನ ಆಚರಿಸಿಕೊಂಡಿಲ್ಲ. ಈ ಬಾರಿಯೂ ಆಚರಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.