ನವದೆಹಲಿ, ಜ. 27 (DaijiworldNews/SM): ಕೇಂದ್ರ ಸರಕಾರ ಫೆಬ್ರವರಿ ಒಂದರಂದು ಬಜೆಟ್ ಮಂಡಿಸಲಿದೆ. ಈ ವರ್ಷವೂ ಕೂಡ ಬಜೆಟ್ ಮಂಡನೆಗೆ ಸಿದ್ಧತೆ ಮಾಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ಡಿಜಿಟಲ್ ರೂಪದಲ್ಲಿ ಬಜೆಟ್ ಅನ್ನು ಮಂಡನೆಗೆ ಸಿದ್ಧತೆ ನಡೆಸಿಕೊಂಡಿದ್ದಾರೆ. ಮುದ್ರಣವನ್ನು ಈ ಬಾರಿಗೆ ಕಡಿತಗೊಳಿಸುವ ಮೂಲಕ ಬಜೆಟ್ ಅನ್ನು ಹಸಿರಾಗಿಸಲಾಗಿದೆ.
ಬಜೆಟ್ ದಾಖಲೆಗಳು ಬಹುತೇಕ ಡಿಜಿಟಲ್ ರೂಪದಲ್ಲಿ ಲಭ್ಯವಿದ್ದು, ಬೆರಳೆಣಿಕೆಯಷ್ಟು ಮಾತ್ರ ಪ್ರತಿಗಳು ಕಾಗದ ರೂಪದಲ್ಲಿ ಲಭ್ಯವಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಅನಗತ್ಯ ಪ್ರಿಂಟಿಂಗ್ ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಇನ್ನು ಬಜೆಟ್ ಮಂಡನೆಗೂ ಮುನ್ನ ಕೇಂದ್ರ ಸರಕಾರ ಸರ್ವ ಪಕ್ಷ ಸಭೆ ನಡೆಸಲಿದ್ದು, ಅದರಲ್ಲಿ ಬಜೆಟ್ ಮಂಡನೆ ಬಗ್ಗೆ ಚರ್ಚೆ ನಡೆಯಲಿದೆ.