ಬೆಂಗಳೂರು, ಜ 27 (DaijiworldNews/HR): ರಾಜ್ಯದಲ್ಲಿ ಗುರುವಾರ 185 ಹೊಸ ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,115 ಕ್ಕೆ ತಲುಪಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಬೆಂಗಳೂರಿನಲ್ಲಿ ಇಂದು 185 ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,115 ಕ್ಕೆ ತಲುಪಿದೆ.
ಇನ್ನು ರಾಜ್ಯದಲ್ಲಿ ಬುಧವಾರ 48,905 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರು ನಗರದಲ್ಲೇ 22,427 ಪ್ರಕರಣಗಳು ವರದಿಯಾಗಿದ್ದವು.
ರಾಜ್ಯದಲ್ಲಿ 3,57,909 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿ ಅತೀ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.